ಅಖಾಡಕ್ಕೆ ಇಳಿಯಲು ಪವನ್ ಕಲ್ಯಾಣ್ ಚುನಾವಣಾ ರಥ ರೆಡಿ

ಟಾಲಿವುಡ್‌ನ (Tollywood) ಪವರ್ ಸ್ಟಾರ್ ಪವನ್ ಕಲ್ಯಾಣ ಸಿನಿಮಾ ಮಾತ್ರವಲ್ಲ, ರಾಜಕೀಯ ರಂಗದಲ್ಲೂ ಬ್ಯುಸಿಯಾಗಿದ್ದಾರೆ. ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ (Pawan Kalyan) ಈಗ ತಮ್ಮ ಚುನಾವಣಾ ರಥವನ್ನ ಪರಿಚಯಿಸಿದ್ದಾರೆ. ಅಖಾಡದಲ್ಲಿ ಅಬ್ಬರಿಸಲು ನಟ ಪವನ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಸೌತ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟ ಪವನ್ ಕಲ್ಯಾಣ್ ಈಗಾಗಲೇ ರಾಜಕೀಯದತ್ತ (Politics) ಮುಖ ಮಾಡಿದ್ದಾರೆ. ತಮ್ಮದೇ ಜನಸೇನಾ ಪಕ್ಷವನ್ನ (Janasena Party) ಕಟ್ಟಿ ಮುಂಬರುವ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗೆ ತಮ್ಮ ಶಕ್ತಿ ಪ್ರದರ್ಶಿಸಲು ಪವನ್ ಕಲ್ಯಾಣ್ ರೆಡಿಯಾಗಿದ್ದಾರೆ. ಅದಕ್ಕಾಗಿ ಚುನಾವಣೆ ಪ್ರಚಾರ ಕಾರ್ಯಕ್ಕೆ `ವಾರಾಹಿ’ (Varahi) ಎಂಬ ರಥವನ್ನು ಕೂಡ ನಟ ಪರಿಚಯಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಿ, ಚುನಾವಣೆ ಕಡೆ ಗಮನ ಕೊಡಲಿದ್ದಾರೆ. ಸದ್ಯ `ವರಾಹಿ’ ರಥದ ಕುರಿತು ಚುನಾವಣೆಗೆ ರೆಡಿ ಎಂಬ ಅರ್ಥದಲ್ಲಿ ಫೋಟೋ ಮತ್ತು ವೀಡಿಯೋವನ್ನ ಪವನ್ ಶೇರ್ ಮಾಡಿದ್ದಾರೆ. ಪ್ರತಿ ಮನೆ ಮನಗಳಿಗೂ ತಲುಪಿ, ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಇನ್ನೂ ಪಾಚಿ ಹಸಿರು ಬಣ್ಣದ `ವರಾಹಿ’ ರಥ ರೆಡಿಯಾಗಿದೆ. ಗಾಡಿ ಒಳಗೆ ಮೀಟಿಂಗ್ ರೂಮ್ ಇದೆ. ವರಾಹಿ ಒಳಗೆ ಎಲ್ಲಾ ಬಗೆಯ ಸೌಲಭ್ಯವಿದೆ. ತಮ್ಮ ಚುನಾವಣಾ(Election) ಪ್ರಚಾರಕ್ಕೆ ಸಹಾಯವಾಗುವ ಎಲ್ಲಾ ಸೌಲಭ್ಯವನ್ನ ವರಾಹಿ ಹೊಂದಿದೆ. ಇನ್ನೂ ವಿಧಾನಸಭೆ ಎಲೆಕ್ಷನ್‌ನಲ್ಲಿ ಪವನ್ ಕಲ್ಯಾಣ್ ಜನರ ಮನ ಗೆದ್ದು ಬರುತ್ತಾರಾ ಎಮಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *