Jammu Kashmir Election |ಕುಟುಂಬದ ಹಿರಿಯ ಮಹಿಳೆಗೆ 10 ಸಾವಿರ, 2 ಸಿಲಿಂಡರ್‌ ಫ್ರೀ : ಬಿಜೆಪಿ ಘೋಷಣೆ

ಶ್ರೀನಗರ: ಕರ್ನಾಟಕದಲ್ಲಿ (Karnataka) ಗ್ಯಾರಂಟಿ ಯೋಜನೆಯನ್ನು (Guarantee Scheme) ವಿರೋಧಿಸುತ್ತಿರುವ ಬಿಜೆಪಿ (BJP) ಕಣಿವೆ ರಾಜ್ಯವನ್ನು ಗೆಲ್ಲಲು ಭರವಸೆಗಳ ಮಹಾಪೂರವನ್ನೇ ಹರಿಸಿದೆ.

ಕುಟುಂಬದ ಹಿರಿಯ ಮಹಿಳೆಗೆ ವರ್ಷಕ್ಕೆ 18 ಸಾವಿರ ರೂ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 10 ಸಾವಿರ ರೂ., ವಿದ್ಯಾರ್ಥಿಗಳಿಗೆ ವರ್ಷಕ್ಕೆ 3 ಸಾವಿರ ರೂ., ಪಿಯು ಮಕ್ಕಳಿಗೆ ಲ್ಯಾಪ್‌ಟಾಪ್, ವರ್ಷಕ್ಕೆರಡು ಗ್ಯಾಸ್ ಸಿಲಿಂಡರ್., ಆಯುಷ್ಮಾನ್ ಭಾರತ್ ಯೋಜನೆಯಡಿ ಐದು ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದೆ.

ಜಮ್ಮುವಿನಲ್ಲಿ ಪಕ್ಷದ ಪ್ರಣಾಳಿಕೆ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, 370 ನೇ ವಿಧಿಯನ್ನು ರದ್ದುಗೊಳಿಸಿದ್ದರಿಂದ ಶಾಂತಿ ವಾತಾವರಣ ನಿರ್ಮಾಣವಾಗಿ ರಾಜ್ಯ ಪ್ರಗತಿಯತ್ತ ಸಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ತಿಂಗಳಿಗೆ 10 ಸಾವಿರ ಕೊಡ್ತೀನಿ, ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇರ್ತೀಯಾ ಅಂತ ಕೇಳಿದ್ದ ರೇಣುಕಾ – ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

 

ಪ್ರಮುಖ ಭರವಸೆಗಳು
– ‘ಮಾ ಸಮ್ಮಾನ್ ಯೋಜನೆ’ ಮೂಲಕ ಪ್ರತಿ ಮನೆಯ ಹಿರಿಯ ಮಹಿಳೆಗೆ ವರ್ಷಕ್ಕೆ 18,000 ರೂ.
– ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ವರ್ಷ 2 ಉಚಿತ ಎಲ್‌ಪಿಜಿ ಸಿಲಿಂಡರ್‌
– 3 ಪಂಡಿತ್ ಪ್ರೇಮ್ ನಾಥ್ ಡೋಗ್ರಾ ರೋಜ್ಗಾರ್ ಯೋಜನೆ (PPNDRY) ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ 5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿ.
– ‘ಪ್ರಗತಿ ಶಿಕ್ಷಾ ಯೋಜನೆ’ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆಯಾಗಿ DBT ಮೂಲಕ ವಾರ್ಷಿಕ 3,000 ರೂ.

– ದೂರದ ಪ್ರದೇಶಗಳಲ್ಲಿ ಹೈಯರ್ ಸೆಕೆಂಡರಿ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ಗಳು/ಲ್ಯಾಪ್‌ಟಾಪ್‌.
– ಶ್ರೀನಗರ ನಗರದ ದಾಲ್ ಸರೋವರವನ್ನು ವಿಶ್ವ ದರ್ಜೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ಮತ್ತು ಜಲ ಕ್ರೀಡೆಗಳಿಗೆ ಉತ್ತೇಜನ.
– ಶ್ರೀನಗರದ ಟ್ಯಾಟೂ ಮೈದಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಸ್ಥಾಪನೆ. ಜಮ್ಮು ನಗರದಲ್ಲಿ ವಿಶೇಷ ಆರ್ಥಿಕ ವಲಯ (SEZ) ಆಗಿ IT ಹಬ್ ನಿರ್ಮಾಣ.
– ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ಈಗ ನೀಡಲಾಗುತ್ತಿರುವ 6,000 ರೂ. ಜೊತೆಗೆ ಹೆಚ್ಚುವರಿಯಾಗಿ 4,000 ರೂ. ಪಾವತಿ.

– ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬಡ್ತಿಯಲ್ಲಿ ಮೀಸಲಾತಿ.
– ಸರ್ಕಾರಿ ಉದ್ಯೋಗಗಳು ಮತ್ತು ಪೊಲೀಸ್ ನೇಮಕಾತಿಯಲ್ಲಿ ಅಗ್ನಿವೀರ್‌ಗಳಿಗೆ 20% ಕೋಟಾ.
– ಪಾಳುಬಿದ್ದ ದೇವಾಲಯಗಳ ಜೀರ್ಣೋದ್ಧಾರ, ನ್ಯಾಯಯುತ ಜನಗಣತಿ.