ಚಿನ್ನದ ಪದಕ ಗೆದ್ದ ಜಮ್ಮು ಬಿಯರ್

ನವದೆಹಲಿ: 2021ರ ಸ್ಪಿರಿಟ್ಜ್ ಆಯ್ಕೆ ಪ್ರಶಸ್ತಿಯಲ್ಲಿ ಜಮ್ಮು ಮೂಲದ ಬಿಯರ್ ‘ದೇವನ್ಸ್ ಮಾಡರ್ನ್ ಬ್ರೂವರೀಸ್ ಲಿಮಿಟೆಡ್ ಚಿನ್ನದ ಪದಕ ಪಡೆದುಕೊಂಡಿದೆ.

ದೇವನ್ಸ್ ಮಾಡರ್ನ್ ಬ್ರೂವರೀಸ್ ಲಿಮಿಟೆಡ್ ನ ಗಾಡ್‍ಫಾದರ್ ಲೆಜೆಂಡರಿ, ಕೋಟ್ಸ್‍ಬರ್ಗ್ ಪಿಲ್ಸ್, ಸಿಕ್ಸ್ ಫೀಲ್ಟ್ಸ್ ಬ್ಲಾಂಚೆ ಮತ್ತು ಸಿಕ್ಸ್ ಫೀಲ್ಡ್ಸ್ ಕಲ್ಟ್ ಎಲ್ಲ ನಾಲ್ಕು ಬಿಯರ್ ಬ್ರಾಂಡ್‍ಗಳು, ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟು ಪದಕಗಳನ್ನು ಗೆದ್ದಿವೆ ಎಂದು ಕಂಪೆನಿಯ ವಕ್ತಾರರು ಇಂದು ತಿಳಿಸಿದ್ದಾರೆ. ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

ಭಾನುವಾರ ದೆಹಲಿಯಲ್ಲಿ ಸ್ಪಿರಿಟ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಸ್ಪರ್ಧೆಯಲ್ಲಿ ಯಾರು ಗೆದ್ದಿದ್ದಾರೆ ಎಂದು ಫೋಷಿಸಿತ್ತು. ಈ ಕಂಪೆನಿಯು ಹಿಂದೆ 2020ರಲ್ಲಿಯೂ ತನ್ನ ಬ್ರಾಂಡ್ ಗೆ ಚಿನ್ನದ ಪದಕ ಗೆದ್ದಿದ್ದು, ಈ ಗೆಲುವು ಎರಡನೇ ಬಾರಿಯಾಗಿದೆ.

ಈ ಬಿಯರ್ ಗಾಡ್ ಫಾದರ್ ಲೆಜೆಂಡರಿ ಸ್ಟ್ರಾಂಗ್ ಬಿಯರ್ ಮತ್ತು ಸ್ಟ್ರಾಂಗ್ ಗೋಲ್ಡ್ ಬಿಯರ್ ವಿಭಾಗದಲ್ಲಿ ಸಿಕ್ಸ್ ಫೀಲ್ಡ್ಸ್ ಕಲ್ಟ್ ಬಿಯರ್‍ಗೆ ಚಿನ್ನದ ಪದಕವನ್ನು ಗೆದ್ದಿದೆ. ಇದು ತನ್ನ ರುಚಿಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಕಂಪೆನಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ವಿಗ್ರಹಗಳ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಮನೆಯಲ್ಲಿದ್ದ ಚಿನ್ನಾಭರಣಗಳ ಲೂಟಿ

ಸಿಕ್ಸ್ ಫೀಲ್ಡ್ಸ್ ಕಲ್ಟ್ ಸ್ಟ್ರಾಂಗ್ ಗೋಲ್ಡ್ ಬಿಯರ್ ಈ ವರ್ಷ ಏಪ್ರಿಲ್‍ನಲ್ಲಿ ಬಿಡುಗಡೆ ಮಾಡಲಾಯಿತು. ಈ ಬ್ರಾಂಡ್ ಪ್ರಾರಂಭವಾದ ಮೊದಲ ವರ್ಷದಲ್ಲೇ ಚಿನ್ನದ ಪದಕ ಗೆದ್ದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಕೋಟ್ಸ್‍ಬರ್ಗ್ ಪಿಲ್ಸ್ ಮತ್ತು ಲ್ಯಾಟ್ ಬಿಯರ್ ವಿಭಾಗದಲ್ಲಿ ಸಿಕ್ಸ್ ಫೀಲ್ಡ್ಸ್ ಬ್ಲಾಂಚೆ ಬೆಳ್ಳಿ ಪದಕವನ್ನು ಗಳಿಸಿತು.

ದೆಹಲಿಯಲ್ಲಿ ಬಿಯರ್ ಬ್ರಾಂಡ್‍ಗಳಿಗಾಗಿ 2020ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಭಾರತದ ಸ್ಪಿರಿಟ್ಸ್ ಈ ಸ್ಪರ್ಧೆಯನ್ನು ಪ್ರಾರಂಭಿಸಿದೆ.

Comments

Leave a Reply

Your email address will not be published. Required fields are marked *