ಕಂದಕಕ್ಕೆ ಬಿದ್ದ ನಂತರವೂ ಬಸ್ಸಿನ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು : ಭಯಾನಕ ಅನುಭವ ಬಿಚ್ಚಿಟ್ಟ ಯತ್ರಾರ್ಥಿ

– ಹಿಂದೂಗಳಿದ್ದ ಬಸ್ಸನ್ನು ಹೊಂಚು ಹಾಕಿ ಸುತ್ತುವರಿದು ಗುಂಡಿನ ದಾಳಿ
– 9 ಮಂದಿ ಬಲಿ, 33 ಮಂದಿಗೆ ಗಾಯ

ಶ್ರೀನಗರ: ಬಸ್ಸು ಕಂದಕಕ್ಕೆ ಬಿದ್ದ ಮೇಲೂ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ರಿಯಾಸಿಯಲ್ಲಿ (Reasi) ಬದುಕಿಳಿದ ವೈಷ್ಣೋದೇವಿ ಯಾತ್ರಾರ್ಥಿಗಳು (Vaishno Devi Temple) ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ಅವಿತ್ತಿದ್ದ ಉಗ್ರರು ಹಿಂದೂಗಳು ತೆರಳುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆಸಿದ್ದಾರೆ. ಮೊದಲು ರಸ್ತೆ ಬದಿಯಿಂದ ದಾಳಿ ನಡೆಸಿದ್ದ ಉಗ್ರರು ಕಂದಕಕ್ಕೆ ಬಿದ್ದ ನಂತರ ಬಸ್ಸು ಬಳಿ ಬಂದು ಹಲವು ನಿಮಿಷ ಗುಂಡಿನ ದಾಳಿ ನಡೆಸಿದ್ದಾರೆ.

ತಂಡದಲ್ಲಿ 6-7 ಮಂದಿ ಇದ್ದರು. ಎಲ್ಲ ಉಗ್ರರು ಮುಖಕ್ಕೆ ಮಾಸ್ಕ್‌ ಹಾಕಿದ್ದರು. ಆರಂಭದಲ್ಲಿ ಬಸ್ಸನ್ನು ಸುತ್ತುವರಿದು ಎಲ್ಲಾ ಕಡೆಯಿಂದ ದಾಳಿ ನಡೆಸಿದ್ದಾರೆ. ಕೆಳಕ್ಕೆ ಉರಳಿದ ನಂತರವೂ ಬಸ್‌ ಬಳಿ ಬಂದು 20 ನಿಮಿಷ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ದಾಳಿ ವೇಳೆ ನಾವೆಲ್ಲ ಮೌನಕ್ಕೆ ಶರಣಾಗಿದ್ದೆವು. ಯಾವುದೇ ಧ್ವನಿ ಹೊರಬಾರದೇ ಇರುವುದನ್ನು ನೋಡಿದ ಉಗ್ರರು ಎಲ್ಲಾ ಪ್ರಯಾಣಿಕರು ಮೃತಪಟ್ಟಿರಬಹುದು ಎಂದು ಭಾವಿಸಿ ತೆರಳಿದ್ದಾರೆ ಎಂದು ಯಾತ್ರಾರ್ಥಿಯೊಬ್ಬರು ಹೇಳಿದ್ದಾರೆ. ದಾಳಿಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು 33 ಮಂದಿ ಗಾಯಗೊಂಡಿದ್ದಾರೆ.

ದಾಳಿ ಹೇಗಾಯ್ತು?
ಜಮ್ಮು ಮತ್ತು ಕಾಶ್ಮೀರದ (Jammu and Kashmir Bus Attack) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಸಂಜೆ 6:10ರ ವೇಳೆಗೆ ಈ ಘಟನೆ ನಡೆದಿದೆ. ಶಿವಖೋಡಿಯ ಗುಹಾ ದೇವಾಲಯದಿಂದ ವೈಷ್ಣೋದೇವಿಯ ಕ್ಷೇತ್ರವಾದ ಕಟ್ರಾಗೆ ಹಿಂದೂಗಳು ಬಸ್ಸಿನಲ್ಲಿ ತೆರಳುತ್ತಿದ್ದರು.  ಇದನ್ನೂ ಓದಿ:ಮೋದಿ ಸಂಪುಟದಲ್ಲಿ ನಡ್ಡಾಗೆ ಸ್ಥಾನ – ಯಾರಾಗ್ತಾರೆ ಬಿಜೆಪಿ ಮುಂದಿನ ಅಧ್ಯಕ್ಷ?

ರಸ್ತೆಯ ಪಕ್ಕದ ಅರಣ್ಯದಲ್ಲಿ ಅವಿತಿದ್ದ ಉಗ್ರರು ಬಸ್ಸಿನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಬಸ್ಸಿನ ಚಾಲಕನಿಗೆ ಬುಲೆಟ್ ತಗುಲಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ಸು ಕಂದಕಕ್ಕೆ ಬಿದ್ದಿದೆ.


ಶೋಧ ಆರಂಭ:
ಈ ಪ್ರದೇಶ ಅರಣ್ಯವನ್ನು ಹೊಂದಿದ್ದು, ಈ ಜಾಗದಲ್ಲಿ ಅಡಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ತಿಂಗಳಿನಿಂದ ರಾಜೌರಿ ಮತ್ತು ಪೂಂಚ್‌ನಲ್ಲಿ ಇತರ ದಾಳಿಗಳನ್ನು ನಡೆಸಿಸಿದ ಉಗ್ರರು ಗುಂಪಿನ ಸದಸ್ಯರೇ ಈ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಭಯೋತ್ಪಾದಕರು ದಟ್ಟವಾದ ಕಾಡಿನಲ್ಲಿ ಅಡಗಿ ಬಸ್ಸು ಬರುವುದನ್ನೇ ಕಾಯುತ್ತಿದ್ದರು. ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಪೊಲೀಸರು ರಾತ್ರಿ 8:10ರ ವೇಳೆಗೆ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.