ವಿದೇಶದಲ್ಲೂ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ರಿಲೀಸ್‌

ಯುವರತ್ನ ಪುನೀತ್ ರಾಜ್‍ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್. ಈ ಸಿನಿಮಾ ನೋಡುವುದಕ್ಕೆ ಕನ್ನಡಿಗರಿಗೆ ಮಾತ್ರವಲ್ಲ, ದೇಶ-ವಿದೇಶಗಳಲ್ಲಿರುವ ಜನರಿಗೂ ಬಹಳ ಕುತೂಹಲವಿದೆ.

‘ಜೇಮ್ಸ್’ ಅಬ್ಬರ ದೇಶ ವಿದೇಶದಲ್ಲಿ ಶುರುವಾಗಿದ್ದು, ಅಪ್ಪು ಕೊನೆಯ ಸಿನಿಮಾವನ್ನು ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಅಪ್ಪು ಹುಟ್ಟಿದ ದಿನ ಮಾರ್ಚ್ 17 ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಅಲ್ಲದೆ ಕನ್ನಡಿಗರಿಗೆ ಚಿತ್ರತಂಡ ಮತ್ತೊಂದು ಖುಷಿ ವಿಚಾರವನ್ನು ಕೊಟ್ಟಿದೆ. ಈ ಸಿನಿಮಾ ಜರ್ಮನಿ, ನೆದಲ್ರ್ಯಾಂಡ್ಸ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಈ ಕುರಿತು ಚಿತ್ರತಂಡ ಪೋಸ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

ಸಿನಿಮಾದ ಟ್ರೇಲರ್ ನೋಡಿಯೇ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ಬಗ್ಗೆ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗವೇ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ‘ಜೇಮ್ಸ್’ ಸಿನಿಮಾ ಕುರಿತಾಗಿ ಒಂದೆರಡು ಫೋಟೋಗಳ ಹೊರತು ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಂಡಿರಲಿಲ್ಲ. ಕಳೆದ ವಾರ ‘ಜೇಮ್ಸ್’ ನಲ್ಲಿ ಅಪ್ಪು ಲುಕ್‍ಗಳ ಫೋಟೋಗಳನ್ನು ರಿಲೀಸ್ ಮಾಡಿದೆ. ಆ ಫೋಟೋದಲ್ಲಿ ಅಪ್ಪು ಸೈನಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಹಾಡುಗಳ ಚಿತ್ರೀಕರಣದ ಫೋಟೋ ಮತ್ತು ಇತರ ಸನ್ನಿವೇಶದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

‘ಜೇಮ್ಸ್’ ಸಿನಿಮಾದಲ್ಲಿ ಅಪ್ಪುಗೆ ಶಿವಣ್ಣ ದನಿಯಾಗಿದ್ದು, ಇದೇ ಮೊದಲ ಬಾರಿ ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ಸಿನಿಮಾದಲ್ಲಿ ಮೂವರು ಕಾಣಿಸಿಕೊಳ್ಳಬೇಕು ಎಂಬುದು ಅಪ್ಪು ಕನಸು ಸಹ ಆಗಿತ್ತು. ಈ ಸಿನಿಮಾದ ಮೂಲಕ ಅವರ ಕನಸು ಈಡೇರಿದ್ದರಿಂದ ಸಿನಿಮಾ ಮತ್ತಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ನಿಜ ಜೀವನದಲ್ಲಿಯೂ ಹೀರೋಯಿನ್ಆದ ಶ್ವೇತಾ ಶ್ರೀವಾತ್ಸವ್!

Comments

Leave a Reply

Your email address will not be published. Required fields are marked *