88 ವರ್ಷಗಳ ಕನ್ನಡ ಚಿತ್ರರಂಗದ ಎಲ್ಲ ದಾಖಲೆ ಮುರಿದ ಜೇಮ್ಸ್ : 100 ಕೋಟಿ, ಅಧಿಕೃತ ಹೇಳಿಕೆ

ಸಾಮಾನ್ಯವಾಗಿ ಕನ್ನಡ ಸಿನಿಮಾ ರಂಗದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಹೇಳುವುದು ಕಡಿಮೆ. 50 ಕೋಟಿ, 100 ಕೋಟಿ ಅಂತ ಗಾಳಿಯಲ್ಲಿ ಗುಂಡು ಹಾರಿಸಿದ್ದೆ ಹೆಚ್ಚು. ಬೆರಳೆಣಿಕೆಯ ಚಿತ್ರ ನಿರ್ಮಾಪಕರು ಮಾತ್ರ ತಮ್ಮ ಸಿನಿಮಾದಿಂದ ಇಂತಿಷ್ಟು ದುಡ್ಡು ಆಗಿದೆ, ಇಂತಿಷ್ಟು ಲಾಭ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಮಾಧ್ಯಮಗಳ ಮುಂದೆ ಬಂದು, ಅದಕ್ಕಾಗಿ ಒಂದು ಜಾಹೀರಾತೂ ಕೊಟ್ಟು, ನಮ್ಮ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಇಷ್ಟು ದುಡ್ಡು ಮಾಡಿದೆ ಎಂದು ಹೇಳುವುದು ತೀರಾ ಕಡಿಮೆ. ಅಂತಹ ಕೆಲಸವನ್ನು ಮಾಡಿದ ಜೇಮ್ಸ್ ಚಿತ್ರತಂಡ.

ಈವರೆಗೂ ಜೇಮ್ಸ್ ಇಷ್ಟು ದುಡ್ಡು ಮಾಡಿದೆ, ಅಷ್ಟು ಮಾಡಿದೆ ಎಂದು ಸುದ್ದಿಗಳನ್ನು ಓದಿದ್ದಿದೆ. ಆದರೆ, ಇದೇ ಮೊದಲ ಬಾರಿಗೆ ತಮ್ಮ ಸಿನಿಮಾ 100 ಕೋಟಿ ಕ್ಲಬ್ ಸೇರಿದೆ ಎಂದು ಅಧಿಕೃತವಾಗಿ ಸಿನಿಮಾ ತಂಡವೇ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ. ಅದರಲ್ಲಿ “88 ವರ್ಷದ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು, ಹೊಸ ಇತಿಹಾಸ ಬರೆದ ಜೇಮ್ಸ್’ ಎಂದು ಟಿಪ್ಪಣಿ ಹಾಕಿಕೊಂಡಿದೆ. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ

ಜೇಮ್ಸ್ ನೂರು ಕೋಟಿ ಕ್ಲಬ್ ಸೇರಲು ಹೆಚ್ಚು ದಿನಗಳನ್ನು ತಗೆದುಕೊಂಡಿಲ್ಲ. ಕೇವಲ 4 ದಿನದಲ್ಲೇ ಈ ಸಾಧನೆ ಮಾಡಿದೆ. ಅತೀ ಕಡಿಮೆ ದಿನದಲ್ಲೇ ನೂರು ಕೋಟಿ ಬಾಚಿದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಬರೀ ನೂರು ಕೋಟಿಯಲ್ಲ, ನೂರು ಕೋಟಿಯನ್ನೂ ದಾಟಿ ಮುನ್ನುಗ್ಗುತ್ತಿದೆ ಎಂದಿದ್ದಾರೆ ನಿರ್ಮಾಪಕರು.  ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?

ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಎರಡು ಶೇಡ್ ಇರುವಂತಹ ಪಾತ್ರವನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪುನೀತ್ ಮತ್ತು ಅವರ  ಇಬ್ಬರು ಸಹೋದರರು ನಟಿಸಿದ ಸಿನಿಮಾ ಇದಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಈ ಸಿನಿಮಾ ದಾಖಲೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ.

Comments

Leave a Reply

Your email address will not be published. Required fields are marked *