ಭೋಪಾಲ್: ಇಂದು ಸಮಾಜದಲ್ಲಿ ನಡೆಯುತ್ತಿರುವ ಅಪರಾಧ ಘಟನೆಗಳಲ್ಲಿ ಶೇ.95 ರಷ್ಟು ಮಹಿಳೆಯರ ತಪ್ಪಿದೆ ಎಂದು ಜೈನ ಮುನಿಗಳಾದ ವಿಶ್ರಾಂತ್ ಸಾಗರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಜೈನ ಮುನಿಗಳಾದ ಮಧ್ಯ ಪ್ರದೇಶ ರಾಜ್ಯದ ಸಿಕಾರ ಜಿಲ್ಲೆಯ ಮುಖ್ಯಾಲಯದಲ್ಲಿ ಚತುರ್ಮಾಸ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಹುಡುಗಿಯರು ಸಮಾಜದಲ್ಲಿ ಅತ್ಯಂತ ಎಚ್ಚರಿಕೆಯಿಂದಿರಬೇಕು. ಹೆತ್ತ ಮನೆ ಮತ್ತು ಕೊಟ್ಟ ಮನೆಗೆ ಗೌರವ ತರುವ ಜವಾಬ್ದಾರಿ ಅವರ ಮೇಲಿದ್ದು, ಸುಸಂಸ್ಕೃತರಾಗಿ ಜೀವನ ನಡೆಸಬೇಕಿದೆ.

ಇಂದು ದೇಶದಲ್ಲಿ ನಡೆಯುತ್ತಿರುವ ಹೆಚ್ಚಿನ ಅಹಿತಕರ ಘಟನೆಗಳಿಗೆ ಶೇ.95 ರಷ್ಟು ಮಹಿಳೆಯರೇ ಕಾರಣ. ಮಹಿಳೆಯರಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿಯೇ ಅಹಿತಕರ ಘಟನೆಗಳು ನಡೆಯುತ್ತಿವೆ. ಇಂದಿನ ಯುವತಿಯರು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ, ದೇಶದ ಪರಂಪರೆಯನ್ನು ಮರೆಯುತ್ತಿದ್ದಾರೆ. ಈ ಕಾರಣದಿಂದಲೇ ದೇಶದಲ್ಲಿ ಶಾಂತಿ ಕದಡುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳುವ ಮೂಲಕ ಹೊಸ ವಿವಾದಕ್ಕೊಂದು ಜೈನ ಮುನಿಗಳು ನಾಂದಿ ಹಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply