ಜೈ ಭೀಮ್: ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ

ಭಾರತೀಯ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದ ತಮಿಳಿನ ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ತಂಡಕ್ಕೆ ಬಂಧನದ ಭೀತಿ ಎದುರಾಗಿದೆ. ಒಂದೊಳ್ಳೆ ಆಶಯ, ವಿಚಾರವನ್ನಿಟ್ಟುಕೊಂಡು ನಿರ್ಮಾಣ ಮಾಡಿದ ಚಿತ್ರತಂಡದ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಚೆನ್ನೈ ಕೋರ್ಟ್ ಪೊಲೀಸ್ ರಿಗೆ ಆದೇಶಿಸಿದೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

ಜೈ ಭೀಮ್ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯದ ಜನರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ‘ರುದ್ರ ವನ್ನಿಯಾರ್ ಸೇನಾ’ ಸಂಘಟನೆಯು ಈ ಹಿಂದೆ ಕೇಸ್ ದಾಖಲಿಸಿತ್ತು. ನಿರ್ದೇಶಕ ಜ್ಞಾನವೇಲ್, ನಿರ್ಮಾಪಕಿ ಜ್ಯೋತಿಕಾ ಮತ್ತು ನಟ ಸೂರ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಹೇಳಲಾಗಿತ್ತು. ಆದರೆ, ಪೊಲೀಸ್ ರು ಎಫ್.ಐ.ಆರ್ ದಾಖಲಿಸಿರಲಿಲ್ಲ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

ಬುಡಕಟ್ಟು ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ ದೃಶ್ಯಗಳಲ್ಲಿ ವನ್ನಿಯಾರ್ ಸಮುದಾಯವನ್ನು ಅವಹೇಳನಕಾರಿಯಂತೆ ಚಿತ್ರಿಸಲಾಗಿದೆ. ಅದರಿಂದ ಆ ಸಮುದಾಯದವರಿಗೆ ತುಂಬಾ ನೋವಾಗಿದೆ ಎಂದು ದೂರದಾರರು ಆರೋಪಿಸಿದ್ದರು. ಏ.29 ರಂದು ಈ ಪ್ರಕರಣವನ್ನು ವಿಚಾರಣೆಗೆ ತಗೆದುಕೊಂಡಿದ್ದ ನ್ಯಾಯಾಧೀಶರು ‘ನಟ, ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ.20ರಂದು ನಡೆಯಲಿದೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

ಬಾಕ್ಸ್ ಆಫೀಸನಲ್ಲಿ ಸಖತ್ ಸದ್ದು ಮಾಡಿ, ಸದ್ಯ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಜೈ ಭೀಮ್ ಚಿತ್ರವು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದೆ. ಜನರಿಂದಲೂ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೈ ಭೀಮ್ ಒಂದೊಳ್ಳೆ ಸಂದೇಶ ನೀಡಿದ ಚಿತ್ರ ಎಂಬ ಪ್ರಶಂಸೆಗೂ ಪಾತ್ರವಾಗಿತ್ತು. ಇದೀಗ  ಚಿತ್ರತಂಡಕ್ಕೆ ಅದು ಸಂಕಷ್ಟ ತಂದಿದೆ.

Comments

Leave a Reply

Your email address will not be published. Required fields are marked *