ಮತ್ತೆ ಬೋಲ್ಡ್ ಅವತಾರದಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

ರಿಯಾಗಿ ಇಂದಿಗೆ 16 ದಿನಗಳ ಹಿಂದೆಯಷ್ಟೇ ತಮ್ಮ 25ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ತಮ್ಮ ಡ್ರೆಸ್ ಗಳಿಂದಾಗಿಯೇ ಸಖತ್ ಸುದ್ದಿ ಆಗುತ್ತಾರೆ. ಯಾರು ಏನೇ ಅಂದರೂ, ಅದನ್ನು ತಲೆಕಡೆಸಿಕೊಳ್ಳದೇ ತಮ್ಮಿಷ್ಟದ ಡ್ರೆಸ್ ಗಳನ್ನು ಹಾಕಿಕೊಂಡು ಖುಷಿ ಪಡುತ್ತಾರೆ. ಅದರಲ್ಲೂ ಜಾಹ್ನವಿಗಾಗಿ ಪಾಪರಾಜಿಗಳ ಕ್ಯಾಮೆರಾಗಳು ಕಾಯುತ್ತಲೇ ಇರುತ್ತವೆ.

ಇದೀಗ ಅಂಥದ್ದೆ ಕಾರಣಕ್ಕಾಗಿ ಮತ್ತೆ ಸುದ್ದಿ ಆಗಿದ್ದಾರೆ. ತುಂಡುಡುಗೆ, ಬಿಕಿನಿ ಮತ್ತು ವಿವಿಧ ವಿನ್ಯಾಸದ ಬೋಲ್ಡ್ ಆಗಿ ಕಾಣುವಂತಹ ಬಟ್ಟೆಗಳನ್ನು ಧರಿಸುವುದರಲ್ಲಿ ಜಾಹ್ನವಿ ಬಾಲಿವುಡ್ ನಟಿಯರಿಗಿಂತ ಮುಂದು. ಈಗ ತೊಟ್ಟಿರುವ ಕಾಸ್ಟ್ಯೂನ್ ನಲ್ಲಿ ಅವರು ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಹೆಚ್ಚು ಟೀಕೆಗೆ ಒಳಗಾಗದೇ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಕಂಗನಾ ಹೊಗಳಿದ್ದು ಇದಕ್ಕಾ? : ಹೊರ ಬಿತ್ತು ಹೊಸ ಸುದ್ದಿ

ಸದ್ಯ ಫಳ ಫಳ ಹೊಳೆಯುವ ನೂರುಕಂಗಳ ಕನ್ನಡಿಯ ಉಡುಪಿನಲ್ಲಿ ಜಾಹ್ನವಿ ಮಿರಮಿರ ಮಿಂಚುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವುದಕ್ಕಾಗಿಯೇ ಈ ಕಾಸ್ಟ್ಯೂಮ್ ಸಿದ್ಧಪಡಿಸಿಕೊಂಡಿದ್ದರಂತೆ. ಈ ಡ್ರೆಸ್ ನಲ್ಲಂತೂ ಅವರು ಕನ್ನಡಕ್ಕೆ ಸವಾಲು ಹಾಕುವಂತೆ ಮಿಂಚಿದ್ದಾರೆ. ಹಾಗಾಗಿ ಟ್ರೋಲ್ ಪೇಜ್ ಗಳು ಸುಮ್ಮನಾಗಿವೆ. ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

ಈ ಹಿಂದೆ ಫ್ರೆಂಡ್ಸ್ ಜತೆ ಬಿಕಿನಿ ತೊಟ್ಟು, ಬೀಚ್ ನಲ್ಲಿ ಕಾಣಿಸಿಕೊಂಡಿದ್ದರು ಜಾಹ್ನವಿ. ಆಗ ಸಖತ್ ಟ್ರೋಲ್ ಆಗಿದ್ದರು. ಈ ಪರಿ ಬಿಕಿನಿ ಹಾಕುವುದು ನಿಮಗೆ ಬೇಕಿತ್ತಾ? ಎಂದು ನೆಟ್ಟಿಗರು ಕೇಳಿದ್ದರು. ಮತ್ತೊಂದು ಸಲ ಜಿಮ್ ಶಾರ್ಟ್ಸ್ ನಲ್ಲಿ ಕಾಣಿಸಿಕೊಂಡಾಗಲೂ ಹಾಗೆಯೇ ಟ್ರೋಲ್ ಆಗಿದ್ದರು. ಆಗ ಜಾಹ್ನವಿ ಟ್ರೋಲ್ ಮಾಡಿದವರಿಗೆ ಖಾರವಾಗಿಯೇ ಉತ್ತರಿಸಿದ್ದರು. ‘ನನ್ನ ಡ್ರೆಸ್ ಮೇಲೆ ನಿಮಗೇಕೆ ಕಣ‍್ಣು? ನನ್ನಿಷ್ಟದಂತೆ ನನಗೆ ಇರಲು ಬಿಡಿ’ ಎಂದಿದ್ದರು.

Comments

Leave a Reply

Your email address will not be published. Required fields are marked *