ಬೆಂಗಳೂರು: ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರ ತಾವು ನಡೆದು ಬಂದಿರು ಹಾದಿ, ಅನುಭವಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳಿಗೆ ಸಂದೇಶ ನೀಡುತ್ತಿರುತ್ತಾರೆ. ಇದೀಗ ಜಗ್ಗೇಶ್ ಅವರ ಜೀವನದಲ್ಲಿ ರಾಯರು ಮಾಡಿರುವ ಪವಾಡಗಳ ಕುರಿತಾಗಿ ಹಂಚಿಕೊಂಡಿದ್ದಾರೆ.

1980ರಲ್ಲಿ ಮಂತ್ರಾಲಯ ತುಂಗಾ ತೀರದ ಬಂಡೆಯ ಮೇಲೆ ಏಕಾಂಗಿ. ಆಗ ಮನದಲ್ಲಿ ಗುನುಗುತ್ತಿದ್ದ ಹಾಡು ನನ್ನವರಾರೂ ನನಗಿಲ್ಲ. ನೀನಲ್ಲದೇ ಬೇರೆ ಗತಿ ಇಲ್ಲ. ನನ್ನಲಿ ಏಕೆ ಕೃಪೆ ಇಲ್ಲ. ಗುರುರಾಯನೆ ನೀನೇ ನನಗೆಲ್ಲ. ರಾಯರಲ್ಲಿ ಅಂದಿನ ನನ್ನ ಬೇಡಿಕೆ ಒಂದೇ. ಮಡದಿಯಾಗಿ ಪರಿಮಳಾ ಬೇಕು, ವೃತ್ತಿಯಾಗಿ ಕಲಾರಂಗಬೇಕು ಎಂದು, ಬೇಡಿದ ಈ ವರಗಳನ್ನು ರಾಯರು ಕರುಣಿಸಿದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ

40 ವರ್ಷ ಹಿಂದೆ ತಿರುಗಿ ಈ ಚಿತ್ರ ನೋಡಿದಾಗ ರಾಯರ ಪವಾಡ ನನ್ನ ಬದುಕಿನ ವಿಸ್ಮಯ. ಮಾಯಸಂದ್ರವೆಲ್ಲಿ, ಚಿತ್ರರಂಗವೆಲ್ಲಿ. ಈಶ್ವರ ಗೌಡ ಜಗ್ಗೇಶ್ ಆದದ್ದೆಲ್ಲಿ. ಅರ್ಪಣಾಭಾವದಿಂದ ನಂಬಿದರೆ ರಾಯರು ಬೃಂದಾವನದಿಂದ ತಾಯಂತೆ ಎದ್ದುಬಂದು ಹರಸುವರು. ಗುರುಭ್ಯೋ ನಮಃ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್
View this post on Instagram
ಈ ಪೋಸ್ಟ್‍ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋದಲ್ಲಿ ನೀವು ರಜನಿಕಾಂತ್ ರೀತಿ ಕಾಣುತ್ತೀರಿ ಎಂದು ಅಭಿಮಾನಿಯೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ. ಸಿನಿಮಾ ರಂಗದಲ್ಲಿ ಯಶಸ್ಸು ಪಡೆಯುವುದಕ್ಕಿಂತ ಮುನ್ನ ಜಗ್ಗೇಶ್ ಬದುಕಿನಲ್ಲಿ ಅನೇಕ ಸಮಸ್ಯೆಗಳಿದ್ದವು. ಅಂದುಕೊಂಡಿದ್ದು ನೆರವೇರಲಿ ಎಂದು ಅವರು ಬೇಡಿಕೊಂಡಿದ್ದು ಗುರುರಾಯರ ಬಳಿ. ಆಗಿನ ಸಮಯ ಹೇಗಿತ್ತು ಎಂಬುದನ್ನು ಜಗ್ಗೇಶ್ ಒಂದು ಫೋಟೋ ಮೂಲಕ ವಿವರಿಸಿದ್ದಾರೆ.

Leave a Reply