ಕರಿಚಿರತೆಯ ಕಾಳಗದ ಬಗ್ಗೆ ಜಗ್ಗೇಶ್ ಹೇಳಿದ್ದೇನು?

ಬೆಂಗಳೂರು: ಬಾಡಿ ಬಿಲ್ಡರ್ ಕಂ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿ ಮೇಲೆ ದುನಿಯಾ ವಿಜಯ್ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಾ ಸಾಗುತ್ತಿದೆ. ಈ ಘಟನೆಯ ಬಗ್ಗೆ ಸ್ಯಾಂಡಲ್ ವುಡ್ ತಾರೆಯರೆಲ್ಲ ದಿಗ್ಭ್ರಾಂತರಾಗಿದ್ದಾರೆ. ಇದೀಗ ಒಂದು ಕಾಲದಲ್ಲಿ ವಿಜಯ್ ಬೆಳವಣಿಗೆಯನ್ನು ಮೆಚ್ಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಟ್ವಿಟರ್ ಮೂಲಕ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕ್ರೂರನಾಗಿದ್ದ ವಾಲ್ಮೀಕಿ ನಾರದರ ಮಾರ್ಗದರ್ಶನದಲ್ಲಿ ರಾಮಾಯಣ ರಚಿಸಿ ಮಹನೀಯನಾದ. ಶಾರದೆಯ ಒಲುಮೆಯಿಂದ ಸಾಮಾನ್ಯ ಅಸಾಮಾನ್ಯನಾದ. ದುನಿಯಾ ವಿಜಿ ಇಂದಿನ ಘಟನೆಯಿಂದ ತನ್ನ ಶ್ರಮವನ್ನು ಗಾಳಿಗೆ ತೂರಿ ಬಿಟ್ಟ. ಕಲಾವಿದ ಸಮಾಜದ ಮಾರ್ಗದರ್ಶಕ ಆಗಬೇಕು. ಇಲ್ಲದಿದ್ದರೆ ನಮ್ಮ ಬೆವರಿಗೂ ಜನರ ಚಪ್ಪಾಳೆಗೂ ಅಪಮಾನ ಮಾಡಿದಂತೆ. ನಶ್ವರ ಜಗಕ್ಕೆ ಗುಣವೇ ಶ್ರೀಮಂತಿಕೆ… ಹೀಗಂತ ಟ್ವಿಟರ್ ಮೂಲಕ ಜಗ್ಗೇಶ್ ದುನಿಯಾ ವಿಜಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ದುನಿಯಾ ವಿಜಿ ಹಲ್ಲೆ ಪ್ರಕರಣ: ಜಯಮ್ಮನ ಮಗನಿಗೆ ಜೈಲು..?

ಇದು ಜಗ್ಗೇಶ್ ಮಾತ್ರವಲ್ಲ ಜನಸಾಮಾನ್ಯರ ಅಭಿಪ್ರಾಯ ಎಂದರೂ ಅತಿಶಯೋಕ್ತಿಯಲ್ಲ. ವಿಜಿ ಉಗುಲಿನಲ್ಲಿ ಹೋಗೋದಕ್ಕೆ ಅನ್ಯಾಯವಾಗಿ ಕೊಡಲಿ ತೆಗೆದುಕೊಂಡಿದ್ದಾರೆ ಎಂಬ ಅಭಿಪ್ರಾಯವೇ ಜನಸಾಮಾನ್ಯರ ಕಡೆಯಿಂದಲೂ ಕೇಳಿ ಬರುತ್ತಿದೆ. ಇದನ್ನೂ ಓದಿ: ನಿನಗೂ, ರೌಡಿಗಳಿಗೂ ಏನು ವ್ಯತ್ಯಾಸ..?- ದುನಿಯಾ ವಿಜಯ್‍ಗೆ ಪೊಲೀಸರಿಂದ ಫುಲ್ ಕ್ಲಾಸ್!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *