ಹೆಣ್ಣು ಮಗುವಿನ ಅಜ್ಜನಾದ ಜಗ್ಗೇಶ್

ಬೆಂಗಳೂರು: ಚಂದನವನದ ನವರಸನಾಯಕ ಜಗ್ಗೇಶ್ ಹೆಣ್ಣು ಮಗುವಿನ ಅಜ್ಜನಾಗಿದ್ದಾರೆ. ಈ ಕುರಿತು ಇನ್ ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಲ್ಲಿ ಮೊಮ್ಮಗಳ ಜೊತೆಗಿನ ಫೋಟೋ ಮತ್ತು ವಿಡಿಯೋ ಹಾಕಿಕೊಂಡು ಸಂತೋಷವನ್ನು ಹಂಚಿಕೊಂಡಿದ್ದಾರೆ.

ಈ ಹಿಂದೆ ಖಾಸಗಿ ವಾಹಿನಿಯಲ್ಲಿ ನನಗೆ ಹೆಣ್ಣು ಮಕ್ಕಳಿಲ್ಲ ಎಂಬ ಕೊರಗು ಯಾವಾಗಲೂ ಕಾಡುತ್ತಿರುತ್ತದೆ ಎಂದು ಜಗ್ಗೇಶ್ ಹೇಳಿಕೊಂಡಿದ್ದರು. ಜಗ್ಗೇಶ್ ಅವರಿಗೆ ಗುರುರಾಜ್ ಮತ್ತು ಯತೀರಾಜ್ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಪುತ್ರ ಗುರುರಾಜ್ ಅವರಿಗೂ ಗಂಡು ಮಗು ಜನಿಸಿತ್ತು. ಹೆಣ್ಣು ಮಕ್ಕಳಿಲ್ಲ ಎಂಬ ಬೇಸರದಲ್ಲಿದ್ದ ಜಗ್ಗೇಶ್ ಮನೆಗೆ ಮಹಾಲಕ್ಷ್ಮಿ ಆಗಮನದಿಂದ ಫುಲ್ ಖುಷಿಯಲ್ಲಿದ್ದಾರೆ.

ನನ್ನ ತಮ್ಮ ರಾಮಚಂದ್ರನ ಮಗನಿಗೆ ಹೆಣ್ಣು ಕಂದ ಹುಟ್ಟಿತು. ನಾನು ಆಸೆಪಟ್ಟ ಹೆಣ್ಣುಮಗು ತಮ್ಮನ ಮಗನಿಂದ ಲಭ್ಯವಾಯಿತು. ನಾನು 3ನೇ ಮೊಮ್ಮಗುವಿಗೆ ತಾತನಾದೆ ಎಂದು ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಜಗ್ಗೇಶ್, ಮೊಮ್ಮಗ ಅರ್ಜುನ್ ಜೊತೆ ಮಗುವಾಗಿದ್ದ ವಿಡಿಯೋವನ್ನು ಪರಿಮಳಾ ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಈ ಟ್ವೀಟ್ ನ್ನು ರೀ ಟ್ವೀಟ್ ಮಾಡಿದ್ದ ಜಗ್ಗೇಶ್, ನನ್ನ ಬದುಕಿಗೆ ಸಂತೋಷಪಡಲು ಇನ್ನೊಂದು ಮಗ್ಗಲಿದೆ ಎಂದು ಪರಿಚಯಿಸಿದ ರಾಯರಮಗ #ಅರ್ಜುನ ಎಂದು ಬರೆಯುವ ಮೂಲಕ ತಮ್ಮ ಜೀವನದಲ್ಲಿ ಮೊಮ್ಮಗನ ಸ್ಥಾನವನ್ನು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *