ಕುರುಬ ಸಮುದಾಯದ ಶಾಸಕರು ವೇಸ್ಟ್ ಬಾಡಿಗಳು: ಜಗದ್ಗುರು ಬಸವರಾಜ ದೇವರು

ಬಾಗಲಕೋಟೆ: ಕುರುಬ ಸಮುದಾಯ ಪ್ರತಿನಿಧಿಸುವ ಶಾಸಕರು ವೇಸ್ಟ್ ಬಾಡಿಗಳು ಎಂದು ಧಾರವಾಡದ ಮನ್ಸೂರು ರೇವಣಸಿದ್ಧೇಶ್ವರ ಜಗದ್ಗುರು ಬಸವರಾಜ ದೇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕರು ಸಮುದಾಯ ಬಿಟ್ಟು ಕತ್ತೆ ಕಾಯಲು ಹೋಗಿದ್ದಾರೋ ಗೊತ್ತಿಲ್ಲ. ಸಮುದಾಯವನ್ನು ನಿರ್ಲಕ್ಷ್ಯ ಮಾಡಿದಲ್ಲಿ ಅದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವುದರ ಮೂಲಕ ವಾಗ್ದಾಳಿ ನಡೆಸಿದರು.

ಲಿಂಗಾಯತ ಹಾಗೂ ವೀರಶೈವ ಧರ್ಮ ತಾಕಲಾಟ ವಿಚಾರದಲ್ಲಿ ಆ ಸಮುದಾಯದ ಸಚಿವರು ಇಲಾಖೆಯ ಕೆಲಸ ಮರೆತು, ಸಮುದಾಯದ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಸಮುದಾಯವನ್ನ ಎಸ್‍ಟಿ ಮೀಸಲಾತಿಗೆ ಸೇರಿಸಬೇಕೆಂಬ ರಾಜ್ಯವ್ಯಾಪಿ ಹೋರಾಟ ನಡೆಯುತ್ತಿದ್ದರೂ ನಮ್ಮ ಸಮುದಾಯದ ನಾಯಕರು ಏನು ಮಾಡುತ್ತಿದ್ದಾರೆ? ಎಲ್ಲಿ ಹೋಗಿದ್ದಾರೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ದಿವಂಗತ ಇಂದಿರಾ ಗಾಂಧಿಯವರನ್ನು ತಯಾರುಮಾಡಿದ ಹಿನ್ನೆಲೆಯನ್ನು ಕುರುಬ ಸಮುದಾಯ ಹೊಂದಿದೆ. ಸಿಎಂ ಸಿದ್ದರಾಮಯ್ಯನವರೇ ಓಟಿಗಾಗಿ ನಮ್ಮನ್ನು ಬಳಸಿಕೊಳ್ಳೋದು ಸರಿಯಲ್ಲ, ನಿಮ್ಮನ್ನು ವಿಧಾನಸೌಧದ ಮೂರನೇ ಮಹಡಿ ಹತ್ತಿಸಿದ್ದು ಕುರುಬರೇ ಎಂದರು.

ಈ ಮೊದಲೇ ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೆ, ಅವರೇ ಮುಖ್ಯಮಂತ್ರಿಗಳಾದರು. ಹೀಗಾಗಿ ಕುರುಬ ಸಮುದಾಯವನ್ನು ಮೀಸಲಾತಿಗೆ ಒಳಪಡಿಸುವ ಜವಾಬ್ದಾರಿ ಅವರು ವಹಿಸಿಕೊಳ್ಳಬೇಕು. ಇಲ್ಲದಿದ್ದರೆ ಕುರುಬ ಸಮುದಾಯದ ಯುವಕರು ಧಂಗೆ ಏಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದೆ ಬಾಗಲಕೋಟೆಯಲ್ಲಿ ಎಸ್‍ಟಿ ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ, ಡಿಸಿ ಕಛೇರಿ ಧ್ವಂಸಗೊಳಿಸಿದ ಪ್ರಕರಣದ ಹಿನ್ನಲೆಯಲ್ಲಿ ಜಗದ್ಗುರು ಬಸವರಾಜ ದೇವರು ಇಂದು ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ್ದರು.

Comments

Leave a Reply

Your email address will not be published. Required fields are marked *