ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ, ಮುಂದೆಯೂ ಬಂದರೆ ಸುಮ್ನೆ ಬಿಡಲ್ಲ: ಶೆಟ್ಟರ್ ವಾರ್ನಿಂಗ್

ಹುಬ್ಬಳ್ಳಿ: ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ಮುಂದೆಯೂ ಬಂದವರಿಗೆ ಸುಮ್ಮನೆ ಬಿಡಲ್ಲ ಅಂತ ವಿರೋಧಿಗಳಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವಾರ್ನಿಂಗ್ ಮಾಡಿದ್ದಾರೆ.

ನಗರದ ಸವಾಯಿಗಂಧರ್ವ ಹಾಲ್‌ನಲ್ಲಿ ನಡೆದ ತಮ್ಮ 68ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಶೆಟ್ಟರ್, ಕಳೆದ ವರ್ಷವೂ ಇದೇ ವೇದಿಕೆಯಲ್ಲಿ ಇದೇ ಮಾತು ಹೇಳಿದ್ದರು. ಈಗ ಅದೇ ಮಾತು ಪುನರುಚ್ಚರಣೆ ಮಾಡಿದ್ದಾರೆ.

ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರ ನೀಡಿದ್ದೇನೆ. ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು. ಆದರೆ 6 ಬಾರಿ ನನ್ನನ್ನು ಜನ ಗೆಲ್ಲಿಸಿದ್ದನ್ನು ಮರೆಯಲ್ಲ ಎಂದಿದ್ದಾರೆ. ಇದನ್ನೂ ಓದಿ: ಇಂದು ದೆಹಲಿಗೆ ತೆರಳಲಿರುವ ಸಿಎಂಗೆ ಆರ್. ಅಶೋಕ್ ಕಿವಿಮಾತು

ನಾನು ಸೋತರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಿದ್ದೇನೆ. ನನ್ನ ಉಸಾಬರಿಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ. ಮುಂದೆಯೂ ನನ್ನ ಉಸಾಬರಿಗೆ ಬಂದವರಿಗೆ ಸುಮ್ಮನೆ ಬಿಡಲ್ಲ ಎಂದು ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದಲ್ಲಿ ಬಿಜೆಪಿ ಇರುವುದ್ರಿಂದ ಪ್ರತಾಪ್ ಸಿಂಹನ ರಕ್ಷಣೆ ಮಾಡ್ತಿದ್ದಾರೆ: ದಿನೇಶ್ ಗುಂಡೂರಾವ್ ಆಕ್ರೋಶ