ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ವಿರೋಧನಾ, ಪರನಾ- ಜಗದೀಶ್ ಶೆಟ್ಟರ್ ಪ್ರಶ್ನೆ

ಗದಗ: ಹಿಜಬ್ ವಿಚಾರದಲ್ಲಿ ಕಾಂಗ್ರೆಸ್ ಸ್ಟ್ಯಾಟರ್ಜಿ ಏನು? ಹಿಜಬ್ ವಿರೋಧನಾ? ಪರವಾಗಿದೆನಾ ಎಂಬುದರ ಬಗ್ಗೆ ಕಾಂಗ್ರಸ್ ಸ್ಪಷ್ಟೀಕರಣ ನೀಡಲಿ ಎಂದು ಮಾಜಿ ಸಿ.ಎಮ್ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಗದಗದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿನಾಕಾರಣ ಸರ್ಕಾರದ ಮೇಲೆ ಆರೋಪ ಮಾಡೋದನ್ನು ನಿಲ್ಲಿಸಲಿ. ಶಾಲಾ ಕಾಲೇಜ್‌ಗಳಲ್ಲಿ ಸಮವಸ್ತ್ರ ಫಾಲೋ ಮಾಡಿದರೆ ಯಾವ ಕಿರಿಕಿರಿನೂ ಇರಲ್ಲ. ನಿಮ್ಮ ಧರ್ಮದ ವಸ್ತ್ರಗಳನ್ನು ಶಾಲಾ ಕಾಲೇಜು ಹೊರಗಡೆ ಇರಲಿ, ಒಳಗಡೆ ಬೇಡ. ಶಾಲಾ ಕಾಲೇಜುಗಳಲ್ಲಿ ಹಿಜಬ್ ಹಾಕಿಕೊಂಡು ಬರುವುದು ಕೋಮು ಸಾಮರಸ್ಯ ಹಾಳು ಮಾಡುತ್ತೆ. ಹಿಜಬ್ ಸಂಸ್ಕೃತಿ ಎಲ್ಲಿ ಹುಟ್ಟಿದೆ ಎಂಬುದುರ ಮೂಲವನ್ನು ಕಾಂಗ್ರೆಸ್ ಹುಡುಕಲಿ. ಅದನ್ನು ಬಿಟ್ಟು ವೋಟ್‌ ಬ್ಯಾಂಕ್‍ಗಾಗಿ ರಾಜಕೀಯ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಲಿ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕೆಲವು ಕಡೆ ಶಾಲೆಗಳಲ್ಲಿ ನಮಾಜ್ ಮಾಡ್ತಿದ್ದಾರೆ. ಈ ಕೆಟ್ಟ ಪದ್ಧತಿ ನಿಲ್ಲಲಿ. ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಮಹಿಳೆಗೆ ಬಹುಮಾನ ಹಾಗೂ ಕಾಂಗ್ರೆಸ್ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸಲಿ. ಆ 6 ಜನ ವಿದ್ಯಾರ್ಥಿಗಳು ಮಾಡಿದ ಕೃತ್ಯ ಈಗ ದೇಶವ್ಯಾಪಿ ಪಸರಿಸಿದೆ. ಅವರು ಮೊದಲು ಎಬಿವಿಪಿನಲ್ಲಾದ್ರು ಇರಲಿ, ಈಗ ಸಿಎಫ್‍ಐನಲ್ಲಾದ್ರೂ ಇರಲಿ. ಇದು ನಡೆಯಬಾರದು. ಈಶ್ವರಪ್ಪ ತಲೆಕೆಟ್ಟವನು ಎಂಬ ಡಿಕೆಶಿ ಹೇಳಿಕೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನಿರಾಕರಿಸಿದರು. ವಯಕ್ತಿಕ ಹೇಳಿಕೆಗೆ ನಾವು ರಿಯಾಕ್ಟ್ ಮಾಡೊದಿಲ್ಲ. ಹಿಜಬ್ ಬಗ್ಗೆ ಕಾಂಗ್ರೆಸ್ ಮೊದಲು ಸ್ಪಷ್ಟ ನಿಲುವಿನ ಬಗ್ಗೆ ಹೇಳಲಿ ಎಂದರು.

Comments

Leave a Reply

Your email address will not be published. Required fields are marked *