ಬೆಳಗಾವಿ: ಬಿಜೆಪಿ ಶಾಸಕ ಶ್ರೀರಾಮುಲು ಅವರಿಗೆ ಆರೋಗ್ಯ ಸಮಸ್ಯೆಯಿದೆ. ಅನಾರೋಗ್ಯದಿಂದಾಗಿ ಅವರು ಈಗ ಮಾತನಾಡುತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುವರ್ಣಸೌಧದ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷ ಎಂದಿಗೂ ರೈತರ ಪರ ಇರುತ್ತೆ. ಬಿಎಸ್ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಇಂದು ಕುಮಾರಸ್ವಾಮಿ ಅವರು ಹಲವು ನಿಯಮಗಳನ್ನು ಹಾಕಿ ಸಾಲ ಮನ್ನಾ ಮಾಡಿದ್ದಾರೆ. 4 ಜನರಿಗೆ ಋಣ ಮುಕ್ತ ಪತ್ರ ಕೊಟ್ಟು ನಾಟಕ ಮಾಡಿದ್ದಾರೆ ಅಷ್ಟೇ ಎಂದರು.
ಇದೇ ವೇಳೆ ಶ್ರೀರಾಮುಲು ಅವರ ಕುರಿತ ಪ್ರಶ್ನೆಗೆ, ರಾಮುಲು ಅವರು ಅನಾರೋಗ್ಯದಿಂದ ಇರುವ ಕಾರಣ ಹೆಚ್ಚು ಮಾತನಾಡಲು ಆಗುತ್ತಿಲ್ಲ ಎಂದು ಉತ್ತರಿಸಿದರು.

ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್ ಅವರು, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ತಮ್ಮ ತಪ್ಪುಗಳ್ನು ಒಪ್ಪಿಕೊಂಡಿದ್ದಾರೆ. ಲಿಂಗಾಯತ ಧರ್ಮ ಒಡೆಯುವ ವಿಚಾರದಲ್ಲಿ ಸಚಿವ ಡಿಕೆ ಶಿವಕುಮಾರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ರು. ಅದ್ರೆ ಈ ಬಗ್ಗೆ ಪ್ರಧಾನಿ ಮೋದಿ ಅವರ ಮೇಲೆ ಬಾರ ಹಾಕಲು ಪ್ರಯತ್ನ ಪಟ್ಟಿದ್ದಾರೆ. ಇದನ್ನು ತಿಳಿದು ರಾಜಕೀಯಕ್ಕಾಗಿ ಧರ್ಮ ಮಾಡಲು ಹೋಗಿದ್ದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.
ಸಮ್ಮಿಶ್ರ ಸರ್ಕಾರ ಮಾಡುತ್ತಿರುವ ರೈತರ ಸಾಲಮನ್ನಾ ನಾಟಕ ಕೂಡ ಬಹಳ ದಿನ ನಡೆಯಲ್ಲ, ರೈತರ ಸಾಲಮನ್ನಾ ಆಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಬರದಿಂದ ಜನ ಕಂಗಾಲಾಗಿದ್ದು, ಹಲವು ಗ್ರಾಮಗಳಲ್ಲಿ ಕುಡಿಯಲು ನೀರು, ಸಾಕು ಪ್ರಾಣಿಗಳಿಗೆ ಮೇವು ಇಲ್ಲದೇ ಗುಳೆ ಹೋಗುತ್ತಿದ್ದಾರೆ. ಸರ್ಕಾರದ ಯಾವ ಅಧಿಕಾರಿ, ಸಚಿವವರು ಭೇಟಿ ನೀಡಿಲ್ಲ. ಲಾಟರಿ ಹೊಡೆದಂತೆ ಸಿಎಂ ಆಗಿರುವ ಸರ್ಕಾರ ಪತನ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

ಬಿಎಸ್‍ವೈ ಎಲ್ಲಿ ಮಲಗಿದ್ರು ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಕಿಡಿಕಾರಿದ ಶೆಟ್ಟರ್, ಇದು ಕುಮಾರಸ್ವಾಮಿ ಅಂಡ್ ಟೀಂನ ಸಂಸ್ಕೃತಿ ತೋರಿಸುತ್ತದೆ. ಹಿಂದೆ ರೈತ ಮಹಿಳೆಗೆ ಸಿಎಂ ಕೇಳಿದ್ರು, ಈಗ ಅದೇ ದಾರಿಯಲ್ಲಿ ಅವರ ಶಾಸಕರು ಮುಂದುವರಿಯುತ್ತಿದ್ದಾರೆ ಎಂದು ಟಾಂಗ್ ನೀಡಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply