ಅನಿಲ್ ಕಪೂರ್ ಪಾತ್ರ ಮಾಡಲಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್!

ಮುಂಬೈ: ಸೈಫ್ ಅಲಿ ಖಾನ್ ಅಭಿನಯದ ರೇಸ್ ಚಿತ್ರದ ಮೂರನೇ ಭಾಗದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿರುವ ಸುದ್ದಿ ಎಲ್ಲರಿಗೂ ಗೊತ್ತಿದೆ. ಹಿಂದಿನ ರೇಸ್ ಸಿನಿಮಾದ ಎರಡು ಭಾಗಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಕಪೂರ್ ಪಾತ್ರವನ್ನು ರೇಸ್-3 ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಲಿದ್ದಾರೆ.

ಇದುವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಜಾಕ್ವೇಲಿನ್ ನಟಿಸುತ್ತಿದ್ದು, ಧೂಮ್ ಚಿತ್ರಗಳಲ್ಲಿ ಅಭಿಷೇಕ್ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ಜಾಕ್ವೆಲಿನ್ ನಟಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ರೇಸ್ ಮೊದಲ ಮತ್ತು ಎರಡನೇಯ ಭಾಗದಲ್ಲಿ ಅನಿಲ್ ಕಪೂರ್ ನಟಿಸಿದ್ದರು. ಆದರೆ ಚಿತ್ರದ ನಿರ್ಮಾಪಕರು ಈ ಚಿತ್ರದಲ್ಲಿ ಏನಾದರೂ ಹೊಸದಾಗಿ ಇರಲಿ ಎಂದು ಜಾಕ್ವೆಲಿನ್ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಚಿತ್ರದಲ್ಲಿ ಸ್ಟಂಟ್‍ಗಳು ತುಂಬಾ ಇದೆ ಹಾಗೂ ಅದನ್ನೆಲ್ಲ ಸ್ವತಃ ಜಾಕ್ವೆಲಿನ್ ಮಾಡಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ರೇಸ್-2 ಸಿನಿಮಾದಲ್ಲಿ ತಮ್ಮ ಗ್ಲಾಮರ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಜಾಕ್ವೆಲಿನ್ ಈಗ ಪೊಲೀಸ್ ಅಧಿಕಾರಿಯಾಗಿ ರಂಜಿಸಲಿದ್ದಾರೆ.

Comments

Leave a Reply

Your email address will not be published. Required fields are marked *