ವಂಚಕನಿಂದಲೇ ಜಾಕ್ವೆಲಿನ್‌ಗೆ ಸಿಕ್ತು 10 ಕೋಟಿ ರೂ. ಬೆಲೆಯ ಗಿಫ್ಟ್

ನವದೆಹಲಿ: 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆಯಲ್ಲಿ ಸಿಕ್ಕಿಬಿದ್ದಿರುವ ವಂಚಕ ಸುಕೇಶ್ ಚಂದ್ರಶೇಖರ್ ಎಂಬಾತ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‍ಗೆ 10 ಕೋಟಿ ರೂ. ಬೆಲೆ ಬಾಳುವ ಉಡುಗೊರೆ ನೀಡಿದ್ದಾನೆ.

ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರು ಜೈಲು ಪಾಲಾದ ವಂಚಕ ಸುಕೇಶ್ ಚಂದ್ರಶೇಖರ್ ಅವರಿಂದ ಕೋಟ್ಯಂತರ ರೂ. ಮೌಲ್ಯದ ಉಡುಗೊರೆಯನ್ನು ಪಡೆದಿದ್ದಾರೆ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಚಾರ್ಜ್‍ಶೀಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಯುವತಿ ಸ್ಕೂಟರ್ ನಂಬರ್ ಪ್ಲೇಟ್‍ನಲ್ಲಿ ‘SEX’ ಪದ- ಮಹಿಳಾ ಆಯೋಗದಿಂದ ನೋಟಿಸ್

ಸುಕೇಶ್ ಯಾರು?
ಸುಕೇಶ್ ಚಂದ್ರಶೇಖರ್ ಮೂಲತಃ ಬೆಂಗಳೂರಿನವ. ಅದ್ದೂರಿ ಜೀವನ ನಡೆಸುವ ಉದ್ದೇಶದಿಂದ ತನ್ನ 17 ನೇ ವಯಸ್ಸಿನಿಂದಲೇ ಜನರನ್ನು ವಂಚಿಸಲು ಪ್ರಾರಂಭಿಸಿದ್ದ. ಬಾಲಾಜಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಚಂದ್ರಶೇಖರ್, ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದ. ನಂತರ ರಾಜಕಾರಣಿಯೊಬ್ಬರ ಸಂಬಂಧಿ ಎಂದು ಹೇಳಿಕೊಂಡು 100ಕ್ಕೂ ಅಧಿಕ ಜನರಿಗೆ ವಂಚನೆ ಮಾಡಿ 75 ಕೋಟಿ ರೂಪಾಯಿ ವಂಚಿಸಿದ್ದಾನೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

ಸುದ್ದಿ ಮಾಧ್ಯಮದ ಪ್ರಕಾರ, 2011 ರಲ್ಲಿ ಚೆನ್ನೈನ ಕೆನರಾ ಬ್ಯಾಂಕ್‍ನಲ್ಲಿ ವಂಚನೆಗೆ ಮುಂದಾಗಿ ಚಂದ್ರಶೇಖರ್ ಮತ್ತು ಆತನ ಗೆಳತಿ ಮರಿಯಾ ಪಾಲ್‍ಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಇಬ್ಬರೂ ಜಾಮೀನಿನ ಮೇಲೆ ಹೊರ ಬಂದಿದ್ದರು.

ಇದಾದ ಬಳಿಕವೂ ಚಂದ್ರಶೇಖರ್, ಅದಿತಿ ಎಸ್.ಸಿಂಗ್ ಅವರಿಂದ 200 ಕೋಟಿ ರೂ. ಪಡೆದು ವಂಚಿಸಿದ್ದ ಹಿನ್ನೆಲೆಯಿಂದ ಮತ್ತೆ ಜೈಲು ಪಾಲಾದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ರಾಮದಾನಿ ಮತ್ತು ದೀಪಕ್ ರಾಮದಾನಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಜೈಲಿನೊಳಗೆ ಮೊಬೈಲ್ ಫೋನ್ ಬಳಸಿ ಸುಲಿಗೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ

ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರಿಗೆ ಕೋಟ್ಯಂತರ ಮೌಲ್ಯದ ಉಡುಗೊರೆ ನೀಡಿರುವುದಾಗಿ ಸುಕೇಶ್ ಚಂದ್ರಶೇಖರ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಇಡಿ ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.

ಸುಕೇಶ್‍ಗೆ ಜಾಕ್ವೆಲಿನ್ ಪರಿಚಯ ಹೇಗಾಯಿತು?
ಸುಕೇಶ್ ಮತ್ತು ನಟಿ ಜಾಕ್ವೆಲಿನ್ 2021 ಜನವರಿಯಿಂದಲೂ ಪ್ರತಿದಿನ ಪರಸ್ಪರ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಬಳಿಕ ವಜ್ರದ ಆಭರಣಗಳು, ನಾಲ್ಕು ಪರ್ಷಿಯನ್ ಬೆಕ್ಕುಗಳು (ಒಂದು ಬೆಕ್ಕಿನ ಬೆಲೆ 9 ಲಕ್ಷ ರೂ.) ಗಿಫ್ಟ್‍ಗಳನ್ನು ನಟಿಗೆ ಕಳುಹಿಸಿದ್ದಾನೆ. ಹಾಗೆಯೇ ಅವರ ಒಡನಾಟ ಬೆಳೆದು ಇವರಿಬ್ಬರೂ ಮುಂಬೈ ಹೋಟೆಲ್‍ನಲ್ಲಿ ಇದ್ದರು ಎನ್ನಲಾಗಿದೆ. ಇಬ್ಬರೂ ಒಟ್ಟಿಗೆ ಓಡಾಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Comments

Leave a Reply

Your email address will not be published. Required fields are marked *