ಮಗಳನ್ನು ಮನೆಯಿಂದಲೇ ಹೊರ ಹಾಕಿದ ಜಾಕಿ ಚಾನ್!

ಬೀಜಿಂಗ್: ಹಾಲಿವುಡ್ ಆ್ಯಕ್ಷನ್ ಕಿಂಗ್, ಸೂಪರ್ ಸ್ಟಾರ್ ಜಾಕಿ ಚಾನ್ ಮಗಳು ಎಟಾ ಎನ್‍ಜಿ ಮನೆಯಿಲ್ಲದೇ ಹಾಂಕಾಂಗ್‍ನ ಬೀದಿ ಬೀದಿಯಲ್ಲಿ ತಿರುಗುತ್ತಿದ್ದಾಳೆ.

ಎಟಾ ಎನ್‍ಜಿ(18), ತನ್ನ ಪ್ರೇಯಸಿ ಆಂಧಿ ಆಟಮ್ ಜೊತೆಯಿರುವ ಒಂದು ಸಣ್ಣ ವಿಡಿಯೋ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾಳೆ. ಆ ವಿಡಿಯೋದಲ್ಲಿ ಎಟಾ ತನ್ನ ಪ್ರೇಯಸಿ ಜೊತೆ ಬ್ರಿಡ್ಜ್ ನ ಕೆಳಗೆ ವಾಸಿಸುತ್ತಿದ್ದು, ನನ್ನ ಹೆತ್ತವರೇ ನನ್ನ ಈ ಸ್ಥಿತಿಗೆ ಕಾರಣ ಎಂದು ಎಟಾ ಆರೋಪಿಸಿದ್ದಾಳೆ.

ತಂದೆ ಜಾಕಿ ಚಾನ್ ಹಾಗೂ ತಾಯಿ ಮಾಜಿ ರೂಪದರ್ಶಿ ಎಲೈನ್ ಎನ್ ಜಿ ಇಬ್ಬರಿಂದ ಎಟಾ ದೂರವಾಗಿದ್ದಾಳೆ. ಎಟಾ ಸಲಿಂಗಕಾಮಿ ಎಂದು ಜಾಕಿ ಚಾನ್ ಆಕೆಯನ್ನು ಮನೆಯಿಂದ ಹೊರಹಾಕಿದ್ದು, ಎಟಾ ತನ್ನ ಪ್ರೇಯಸಿ ಜೊತೆ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾಳೆ.

ನನ್ನ ಹೆತ್ತವರಿಂದ ನಾನು ಒಂದು ತಿಂಗಳಿನಿಂದ ನಿರಾಶ್ರಿತಳಾಗಿದ್ದೇನೆ. ನಾವು ಬ್ರಿಡ್ಜ್ ಕೆಳಗೆ ಹಾಗೂ ಬೇರೆ ಬೇರೆ ಜಾಗಗಳಲ್ಲಿ ರಾತ್ರಿಯನ್ನು ಕಳೆಯುತ್ತಿದ್ದೇವೆ. ನಾವು ಆಸ್ಪತ್ರೆ, ಪೊಲೀಸ್ ಠಾಣೆ, ಆಹಾರ ನಿಧಿ, ಲೈಂಗಿಕ ಅಲ್ಪಸಂಖ್ಯಾತರ ಸಹಾಯ ಕೇಂದ್ರಗಳಲ್ಲಿ ಸಹಾಯ ಕೇಳಿದರೂ, ಯಾರೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ ಎಂದು ಎಟಾ ತಿಳಿಸಿದ್ದಾಳೆ.

ನಮಗೆ ಈಗ ಏನೂ ಮಾಡಬೇಕೆಂಬುದು ತಿಳಿಯುತ್ತಿಲ್ಲ. ನಾವು ಎಷ್ಟು ಕಷ್ಟದಲ್ಲಿ ಇದ್ದೇವೆ ಎನ್ನುವುದನ್ನು ಜನರಿಗೆ ತಿಳಿಸಲು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ ಎಂದಿದ್ದಾಳೆ.

ಸದ್ಯ ಜಾಕಿ ಚಾನ್ ತನ್ನ ಮಗಳ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ ತನ್ನ ಮಗಳು ಸಲಿಂಗಕಾಮಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಎಟಾ ತಾಯಿ, ಆಕೆಗೆ ಕೆಲಸದ ಅವಶ್ಯಕತೆ ಇದೆ. ಹಾಗಾಗಿ ಈ ರೀತಿ ಮಾಡುತ್ತಿದ್ದಾಳೆ ಎಂದು ಹೇಳಿ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಆಕೆಗೆ ದುಡ್ಡಿನ ಅವಶ್ಯಕತೆ ಇದ್ದರೆ ಕೆಲಸ ಹುಡುಕಿಕೊಂಡು ದುಡಿದು ಹಣ ಸಂಪಾದಿಸಲಿ. ಜಗತ್ತಿನಲ್ಲಿರುವ ಎಲ್ಲ ಜನರು ದುಡಿಯುತ್ತಾರೆ. ಯಾರೂ ತಮ್ಮ ಪೋಷಕರ ಖ್ಯಾತಿಯ ಮೇಲೆ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ ಎಂದು ಎಟಾ ತಾಯಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

https://www.youtube.com/watch?v=v3s4AxWIgB0

Comments

Leave a Reply

Your email address will not be published. Required fields are marked *