ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ

ನವದೆಹಲಿ: ನಾನು ನನ್ನ ಮಕ್ಕಳ ಹೋಮ್ ವರ್ಕ್ ಅನ್ನು ಪೂರ್ಣಗೊಳಿಸಲು ಮುಂಜಾನೆ 3-4 ಗಂಟೆಯವರೆಗೆ ಅವರೊಂದಿಗೆ ಕುಳಿತುಕೊಳ್ಳುತ್ತಿದ್ದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾ ಲೈವ್ ನಲ್ಲಿ ಜನರ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಒಬ್ಬರು ನೀವು ನಿಮ್ಮ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ರಾ? ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ಹೌದು. ನಾನು ನನ್ನ ಮಕ್ಕಳು ಹೋಮ್ ವರ್ಕ್ ಮಾಡಲು ಸಹಾಯ ಮಾಡುತ್ತಿದ್ದೆ. ಕೆಲವೊಮ್ಮೆ ನನಗೆ ಪಕ್ಷದ ಕೆಲಸವಿದ್ದು, ಪ್ರಚಾರ ನಡೆಯುವ ಸಂದರ್ಭದಲ್ಲಿ ನಾನು ಮನೆಗೆ ತಡವಾಗಿ ಬಂದರೂ ತಕ್ಷಣ ಅವರಿಗೆ ಹೋಮ್ ವರ್ಕ್ ಮಾಡಿಸುತ್ತಿದ್ದೆ. ಕೆಲವೊಮ್ಮೆ ಬೆಳಗ್ಗೆ 3-4 ಗಂಟೆವರೆಗೂ ಅವರ ಜೊತೆಯಲ್ಲೇ ಕುಳಿತುಕೊಂಡು ಹೋಮ್ ವರ್ಕ್ ಮಾಡಿಸುತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ

ನನ್ನ ಮಕ್ಕಳಿಗೆ ಹೋಮ್ ವರ್ಕ್ ಮಾಡಿಸುವುದರ ಜೊತೆಗೆ ಅವರ ಸ್ನೇಹಿತರು ಸಹ ನಮಗೂ ಸಹಾಯ ಮಾಡಿ ಎಂದು ಬರುತ್ತಿದ್ದರು. ಆ ಮಕ್ಕಳಿಗೂ ಸಹ ನಾನು ಹೋಮ್ ವರ್ಕ್ ಮಾಡಿಸುತ್ತಿದ್ದೆ ಎಂದು ಹೇಳಿ ನಕ್ಕಿದ್ದಾರೆ.

ನಿಮ್ಮ ಮಕ್ಕಳಿಗೆ ಈಗಲೂ ಅಸೈನ್‌ಮೆಂಟ್ ಗೆ ಸಹಾಯ ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗಳು ಇಂದು ಬೆಳಗ್ಗೆ ಕಾಲ್ ಮಾಡಿ ನನ್ನದೊಂದು ಅಸೈನ್‍ಮೆಂಟ್ ಇದೆ ಚೆಕ್ ಮಾಡು ಎಂದು ಹೇಳಿದ್ದಾಳೆ. ಅವರಿಗೆ ಓದಿನಲ್ಲಿ ಯಾವುದೇ ರೀತಿಯ ಸಮಸ್ಯೆ ಬಂದರೂ ನನ್ನ ಬಳಿ ಅವರು ಮುಕ್ತವಾಗಿ ಕೇಳುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಪ್ರಿಯಾಂಕಾ ಗಾಂಧಿ ಅವರಿಗೆ ಇಬ್ಬರು ಮಕ್ಕಳಿದ್ದು, ಮಿರಾಯಾ ವಾದ್ರಾ ಮತ್ತು ರೈಹಾನ್ ವಾದ್ರಾ ಎಂದು ಹೆಸರಿಟ್ಟಿದ್ದಾರೆ.

 

Comments

Leave a Reply

Your email address will not be published. Required fields are marked *