ಮುಂಬೈ: ಪಾಕಿಸ್ತಾನ (Pakistan) ತಂಡ ಟಿ20 ವಿಶ್ವಕಪ್ (T20 World Cup) ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ (England) ವಿರುದ್ಧ ಸೋತ ಬೆನ್ನಲ್ಲೇ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಕಾಲೆಳೆದಿದ್ದಾರೆ.

ಭಾರತ ಸೆಮಿಫೈನಲ್ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆಯದೇ ಸೋತಾಗ ಶೋಯೆಬ್ ಅಖ್ತರ್ ಭಾರತ (India) ಕುರಿತಾಗಿ ಗೇಲಿ ಮಾಡಿದ್ದರು. ಇದೀಗ ಪಾಕಿಸ್ತಾನ ಸೋತ ಬೆನ್ನಲ್ಲೇ ಸ್ವಾರಿ ಬ್ರದರ್ ಇದನ್ನೇ ಕರ್ಮ ಎನ್ನುವುದು ಎಂದು ಬರೆದುಕೊಂಡು ಟ್ವೀಟ್ ಮಾಡಿ ಶೋಯೆಬ್ ಅಖ್ತರ್‌ಗೆ ಠಕ್ಕರ್ ನೀಡಿದ್ದಾರೆ. ಇದನ್ನೂ ಓದಿ: ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

ಪಾಕ್ ಸೋತ ಬೆನ್ನಲ್ಲೇ ಶೋಯೆಬ್ ಅಕ್ತರ್ ಛಿದ್ರವಾದ ಹೃದಯದ ಇಮೋಜಿ ಹಾಕಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಇದನ್ನು ಕಂಡು ಶಮಿ, ಅಖ್ತರ್‌ಗೆ ಕಿಚಾಯಿಸಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಚರ್ಚೆಯಾಗುತ್ತಿದೆ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್
Sorry brother
It’s call karma 💔💔💔 https://t.co/DpaIliRYkd
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) November 13, 2022
ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 137 ರನ್‍ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೌಲಿಂಗ್‍ನಲ್ಲಿ ಸ್ಯಾಮ್ ಕರ್ರನ್ ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಬೆನ್‍ಸ್ಟೋಕ್ಸ್ (Ben Stokes) ಆಧಾರವಾದರು. ಪರಿಣಾಮ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಬಾರಿಸಿ ಇನ್ನೂ 1 ಓವರ್ ಬಾಕಿ ಇರುವಂತೆ 5 ವಿಕೆಟ್‍ಗಳ ಅಂತರದಿಂದ ಇಂಗ್ಲೆಂಡ್ ಗೆದ್ದು ವಿಶ್ವಕಪ್ ಎತ್ತಿ ಹಿಡಿಯಿತು.

Leave a Reply