ಮದುವೆ ಮನೆಗೆ ಬಂದವರಂತೆ ಬಂದ ಅಧಿಕಾರಿಗಳು- ಕೈ ಮುಖಂಡೆ, ಅಳಿಯನ ಮನೆ ಮೇಲೆ ಐಟಿ ರೇಡ್

ಚಿಕ್ಕಮಗಳೂರು/ಹಾಸನ: ಕಾಂಗ್ರೆಸ್ (Congress) ನಾಯಕಿ ಗಾಯತ್ರಿ ಶಾಂತೇಗೌಡ (Gayatri Shante Gowda) ಹಾಗೂ ಹಾಸನದಲ್ಲಿರುವ (Hassan) ಅವರ ಅಳಿಯನ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ (Raid) ನಡೆಸಿದ್ದಾರೆ.

ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡೆ ಹಾಗೂ ಅವರ ಅಳಿಯನಿಗೆ ಐಟಿ (IT) ಶಾಕ್ ನೀಡಿದೆ. ಚಿಕ್ಕಮಗಳೂರು ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ನಿವಾಸ ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನೂ ಚಿಕ್ಕಮಗಳೂರು ತಾಲೂಕಿನ ಮರ್ಲೆ ಕಲ್ಲಿನ ಕ್ರಷರ್, ಗಾಯಿತ್ರಿ ಶಾಂತೇಗೌಡ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮನೆ ಹಾಗೂ ಬೇಲೂರಿನಲ್ಲಿರುವ ಅಳಿಯನ ನಿವಾಸದ ಮೇಲೂ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ಮಾಜಿ ಎಂಎಲ್ಸಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಗಾಯತ್ರಿ ಶಾಂತೇಗೌಡ ಅವರು ಸದ್ಯ ತಿರುಪತಿ ತೀರ್ಥ ಯಾತ್ರೆಯಲ್ಲಿದ್ದಾರೆ. ಮೂರು ದಿನಗಳ ಹಿಂದೆ ಗಾಯತ್ರಿ ಶಾಂತೇಗೌಡ ದೇವರ ದರ್ಶನಕ್ಕೆ ಹೋಗಿದ್ದಾರೆ.

ಇನ್ನೂ ಹಾಸನದಲ್ಲಿರುವ ಗಾಯತ್ರಿ ಶಾಂತೇಗೌಡ ಅವರ ಅಳಿಯ ಸಂತೋಷ್‍ಗೂ ಐಟಿ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ. ಬೆಳಿಗ್ಗೆ ಸುಮಾರು 5.30 ರ ಸಮಯದಲ್ಲಿ ಎರಡು ಕಾರುಗಳಿಗೆ ಅಭಿನವ್ ವೆಡ್ಸ್ ದೀಪಿಕಾ ಎಂದು ಸ್ಟಿಕರ್ ಅಂಟಿಸಿಕೊಂಡು ಮದುವೆ ಮನೆಗೆ ಬಂದವರಂತೆ ಬಂದ ಐವರು ಐಟಿ ಅಧಿಕಾರಿಗಳು ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಚನ್ನಕೇಶವೇಗೌಡ್ರು ಬೀದಿಯಲ್ಲಿರುವ ಸಂತೋಷ್ ಮನೆಗೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಟೋಲ್ ಬೂತ್ ಸಿಬ್ಬಂದಿಗೆ ಕಪಾಳಮೋಕ್ಷ – ಎಎಪಿ ನಾಯಕನ ವಿರುದ್ಧ FIR

ಸಂತೋಷ್ ತಂದೆ ದಿ.ಮಂಜುನಾಥ್ ಜೆಡಿಎಸ್‍ನ ಪ್ರಭಾವಿ ಮುಖಂಡರಾಗಿದ್ದರು. ಸಂತೋಷ್ ತಾಯಿ ಹೇಮಾವತಿ ಮಂಜುನಾಥ್ ಹಾಸನ ಜಿ.ಪಂ. ಮಾಜಿ ಅಧ್ಯಕ್ಷೆ. ಚಿಕ್ಕಮಗಳೂರಿನಲ್ಲಿ ಗಾಯಿತ್ರಿ ಶಾಂತೇಗೌಡರ ಮನೆಯ ಮೇಲೆ ಐಟಿ ರೇಡ್ ಆಗಿದ್ದರೆ, ಬೇಲೂರಿನಲ್ಲಿ ಅವರ ಅಳಿಯ ಸಂತೋಷ್ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆ ಪತ್ರ, ನಗದು, ಇತರೆ ವಸ್ತುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

ಮನೆಯಲ್ಲಿ ಸಂತೋಷ್, ಪತ್ನಿ ಕಾವ್ಯಾ ಹಾಗೂ ಸಂತೋಷ್ ತಾಯಿ ಹೇಮಾವತಿ ಮಂಜುನಾಥ್ ಇದ್ದಾರೆ. ಮನೆಯಿಂದ ಯಾರು ಹೊರಗೆ ಹೋಗದಂತೆ ಮನೆಗೆ ತಿಂಡಿ ತರಿಸಿಕೊಂಡು ಪರಿಶೀಲನೆ ಮುಂದುವರಿಸಿದ್ದಾರೆ. ಮನೆ ಕೆಲಸದವರನ್ನು ಕೂಡ ಐಟಿ ಅಧಿಕಾರಿಗಳು ಮನೆಗೆ ಒಳಗೆ ಬಿಟ್ಟಿಲ್ಲ. ಇದೀಗ ಇನ್ನಿಬ್ಬರು ಐಟಿ ಅಧಿಕಾರಿಗಳು ಸಂತೋಷ್ ಮನೆಗೆ ಆಗಮಿಸಿದ್ದು, ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಸಂತೋಷ್ ಬೇಲೂರಿನಲ್ಲಿರುವ ಕಲ್ಯಾಣ ಮಂಟಪ ಹಾಗೂ ಸುಮುಖ ಗ್ರ್ಯಾಂಡ್ ಹೋಟೆಲ್‍ನ ಮಾಲೀಕರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *