ಐಟಿ ಡ್ರಿಲ್ಲಿಂಗ್: ಅಧಿಕಾರಿಗಳ ಆ ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದು ಹೀಗೆ

ಬೆಂಗಳೂರು: ಡಿಕೆ ಶಿವಕುಮಾರ್ ವಿಚಾರಣೆಯ 3ನೇ ದಿನವಾದ ಶುಕ್ರವಾರ ಐಟಿ ಡಿಜಿ ಬಾಲಕೃಷ್ಣನ್ ಆಗಮಿಸಿ ಪ್ರಶ್ನೆ ಕೇಳಿದ್ದಾರೆ. ಹಲವಾರು ಪ್ರಶ್ನೆಗಳನ್ನು ಕೇಳಿದ್ದು ಈ ಪ್ರಶ್ನೆಗೆ ಡಿಕೆಶಿ ಉತ್ತರಿಸಿದ್ದು, ಏನು ಉತ್ತರಿಸಿದ್ದಾರೆ ಎನ್ನುವುದು ಐಟಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ದೆಹಲಿಯಲ್ಲಿ ನಿಮ್ಮ ಆಪ್ತರ ಮನೆಯಲ್ಲಿ ದುಡ್ಡು ಸಿಕ್ಕಿದೆಯೆಲ್ಲ ಎಂದು ಕೇಳಿದ್ದಕ್ಕೆ ಡಿಕೆಶಿ, ಬೇರೆ ಮನೆಯಲ್ಲಿ ಸಿಕ್ಕ ವಸ್ತುಗಳಿಗೆ ಹಣಕ್ಕೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅಧಿಕಾರಿಗಳು, ಅದು ನಿಮಗೆ ಸೇರಿದೆ ಎನ್ನುವ ಮಾಹಿತಿ ಸಿಕ್ಕಿದೆ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮನೆಯಲ್ಲಿ ಏನು ಸಿಕ್ಕಿದೆ ಅದನ್ನು ಕೇಳಿದರೆ ಹೇಳುತ್ತೇನೆ ಎಂದಿದ್ದಾರೆ.

ನಿಮ್ಮ ಪಾಲುದಾರಿಕೆಯಲ್ಲಿ ಏನೇನಿದೆ ಎಂದು ಐಟಿ ಅವರು ಕೇಳಿದದ್ದಕ್ಕೆ, ಪಾಲುದಾರಿಕೆಯ ಬಗ್ಗೆ ನನ್ನ ಕಡೆಯವರು ನೋಡಿಕೊಳ್ತಾರೆ. ಅದನ್ನೆಲ್ಲಾ ವಕೀಲರ ಜೊತೆ ಚರ್ಚಿಸಿ ಉತ್ತರ ನೀಡುತ್ತೇನೆ ಎಂದು ಉತ್ತರಿಸಿದ್ದಾರೆ. ಈ ವೇಳೆ, ನಿಮ್ಮ ಎಲ್ಲ ವ್ಯವಹಾರಗಳಿಗೂ ಐಟಿ ರಿಟರ್ನ್ ಸಲ್ಲಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಅದನ್ನೆಲ್ಲಾ ನಮ್ ಅಕೌಟೆಂಟ್ ನೋಡಿಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಉತ್ತರಕ್ಕೆ, ನಿಮಗೆ ಇದರ ಬಗ್ಗೆ ಮಾಹಿತಿ ಇಲ್ಲವೇ ಎಂದು ಐಟಿ ಮರು ಪ್ರಶ್ನೆ ಹಾಕಿದೆ. ಅದಕ್ಕೆ ಡಿಕೆಶಿ ನಾನು ರಾಷ್ಟ್ರೀಯ ರಾಜಕಾರಣದಲ್ಲಿಯೂ ಸಕ್ರಿಯವಾಗಿ ಇದ್ದೇನೆ. ಇದು ನನ್ನ ಅರಿವಿಗೆ ಇಲ್ಲ ಎಂದಿದ್ದಾರೆ.

ಸೋಫಾ ಸೆಟ್ ಮತ್ತು ಸ್ಕ್ರೀನ್‍ಗಳನ್ನು ಎಲ್ಲಿಂದ ತರಿಸಿದ್ದು? ಇದು ಉಡುಗೊರೆನಾ ಎಂದು ಪ್ರಶ್ನಿದ್ದಕ್ಕೆ, ಡಿಕೆಶಿ, ಉಡುಗೊರೆ ಯಾವುದು ಬಂದಿಲ್ಲ. ನಮ್ಮ ಮನೆಯವರೇ ತಂದಿರುತ್ತಾರೆ ಎಂದು ಉತ್ತರಿಸಿದ್ದಾರೆ. ಕೂಡಲೇ ಅಧಿಕಾರಿಗಳು ಈಗ ಆ ಬಿಲ್‍ಗಳನ್ನು ನೀವು ಕೊಡಬಹುದೇ ಎಂದು ಕೇಳಿದ್ದಕ್ಕೆ ಶಿವಕುಮಾರ್ ತುಂಬಾ ದಿನದ ಹಿಂದೆ ಆಗಿರುವ ಕಾರಣ ಎಲ್ಲ ಬಿಲ್ ಇಟ್ಟುಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.

ಬಾಲಕೃಷ್ಣನ್ ಯಾರು?: 1983ನೇ ಬ್ಯಾಚಿನ ಅಧಿಕಾರಿ ಆಗಿರುವ ಕೆ.ಆರ್.ಬಾಲಕೃಷ್ಣನ್ ಖಡಕ್ ಅಧಿಕಾರಿ ಎಂದೇ ಫೇಮಸ್. ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಪ್ರಧಾನ ನಿರ್ದೆಶಕರಾಗಿರುವ ಬಾಲಕೃಷ್ಣನ್ ತಮಿಳುನಾಡಿನಲ್ಲಿ ಹಲವಾರು ದಾಳಿಗಳನ್ನು ನಡೆಸಿ ಅಕ್ರಮಗಳನ್ನು ಬಯಲಿಗೆ ಎಳೆದಿದ್ದರು.ಅಕ್ರಮ ಗುಟ್ಕಾ ಮಾರಾಟ ಹಗರಣವನ್ನು ಇವರು ಬಯಲು ಮಾಡಿದ್ದರು. 2016ರಲ್ಲಿ ತಮಿಳುನಾಡು ಚುನಾವಣಾ ವೆಚ್ಚದ ಉಸ್ತುವಾರಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬಾಲಕೃಷ್ಣನ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಂಬಿಕಸ್ಥ ಅಧಿಕಾರಿ ಆಗಿದ್ದಾರೆ.

ಇದನ್ನೂ ಓದಿ: ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ

 

Comments

Leave a Reply

Your email address will not be published. Required fields are marked *