ನಾಲಗೆ ಬಿಗಿ ಹಿಡಿದು ಮಾತನಾಡಬೇಕಾದ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ: ಹೆಚ್.ಕೆ.ಪಾಟೀಲ್

ಬೆಂಗಳೂರು: ನಾಲಗೆಯನ್ನು ಬಿಗಿ ಹಿಡಿದು ಮಾತನಾಡಬೇಕಾದ ದೊಡ್ಡ ಜವಾಬ್ದಾರಿ ಮೋದಿಯವರ (Narendra Modi) ಮೇಲಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ (H K Patil) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಬಹಳ ಜನರಿಂದ ಬುದ್ಧಿ ಹೇಳಿಸಿಕೊಳ್ಳಬೇಕಾದ ಸ್ಥಿತಿಗೆ ಮೋದಿಯವರು ಬಂದಿದ್ದಾರೆ. ತಪ್ಪು ಮಾಡಿದರೆ ಮೋದಿಯವರಿಗೂ ಬುದ್ಧಿ ಹೇಳಬೇಕಾಗುತ್ತದೆ. ಮೋದಿ ವಿರುದ್ಧ ಸಿಎಂ ಪುಢಾರಿ ಪದ ಬಳಸಿದ್ದಾರೆ ಎಂದರೆ ನಾಲಗೆ ಬಿಗಿ ಹಿಡಿದು ಮಾತನಾಡುವ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ. ಪ್ರಜಾಪ್ರಭುತ್ವ ಯಶಸ್ಸಿಗೆ ಒಕ್ಕೂಟ ವ್ಯವಸ್ಥೆ ಕಾರಣ. ಒಕ್ಕೂಟ ವ್ಯವಸ್ಥೆಯನ್ನೇ ಅಶಕ್ತಗೊಳಿಸುವ ನಿಟ್ಟಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಚಿಕನ್ ನೀಡದ್ದಕ್ಕೆ ಹೋಟೆಲ್ ಸಪ್ಲೈಯರ್‌ನನ್ನು ಹತ್ಯೆಗೈದ ಯುವಕರು!

ಟ್ವೀಟ್ ಮೂಲಕ ಕರ್ನಾಟಕದ (Karnataka) ಬಗ್ಗೆ ಹೇಳಿಕೆ ಕೊಡೋದು ಸರಿನಾ? ನ್ಯಾಯಬದ್ಧವಾಗಿ ಬರಬೇಕಾದ ಬರ ಪರಿಹಾರ ಕೊಡಲಿಲ್ಲ. ಸುಪ್ರೀಂ ಕೋರ್ಟ್‌ಗೆ ಹೋಗಿ ನಮ್ಮ ಪಾಲು ಪಡೆಯಬೇಕಾಯಿತು. ಇದು ನಿಮ್ಮ ರೀತಿ ನೀತಿ, ಗ್ಯಾರಂಟಿಗಳನ್ನ ಸಹಿಸದೆ ಸಂಕಟ ಬಿದ್ದು ಮಾತನಾಡಿದರೆ ಹೇಗೆ? ತಪ್ಪು ಮಾಡಿದಾಗ ಮೋದಿಯವರಿಗೂ ಬುದ್ಧಿಮಾತು ಹೇಳಬೇಕಾಗುತ್ತದೆ. ಬಹಳ ಬುದ್ಧಿ ಹೇಳಿಸಿಕೊಳ್ಳುವ ಹಂತಕ್ಕೆ ಮೋದಿ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಫೋನ್‌ 16 ಆಯ್ತು ಈಗ ಇಂಡೋನೇಷ್ಯಾದಲ್ಲಿ ಗೂಗಲ್‌ ಪಿಕ್ಸೆಲ್‌ ಮಾರಾಟಕ್ಕೆ ನಿಷೇಧ
ಮೋದಿ ಗ್ಯಾರಂಟಿ ಬದಲು ಕರ್ನಾಟಕ ಗ್ಯಾರಂಟಿ ಚರ್ಚೆ ಆಗುತ್ತಿದೆ. ಗ್ಯಾರಂಟಿ ಕುರಿತು ಲಘುವಾಗಿ ಮಾತನಾಡುತ್ತಾರೆ. ಇದು ಸರಿನಾ? ನಾವು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಜಾರಿ ಮಾಡಿಲ್ವ? ವಕ್ಫ್ ಬೋರ್ಡ್ ತೆಗೆಯುತ್ತೇವೆ ಅಂದರೆ ಏನ್ರಿ ಅದು? ವಕ್ಫ್ ಬೋರ್ಡ್ ಅಂದರೆ ಸರ್ಕಾರದ ಒಂದು ಭಾಗ. ಇಷ್ಟು ದಿನ ವಕ್ಫ್ ಬೋರ್ಡ್ (Waqf Board) ಕಾಣಿಸಲಿಲ್ವ? ಈಗ ಚುನಾವಣೆ ಬಂದಿದೆ, ಜನರ ಭಾವನೆಗಳನ್ನ ಕೆರಳಿಸಲು ಈ ರೀತಿ ಮಾಡುತ್ತೀರಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪಾರದರ್ಶಕ ಚುನಾವಣೆ ಹಾಳುಗೆಡವಲು ಕಾಂಗ್ರೆಸ್ ಸಂಚು; ಹೆಚ್‌ಡಿಕೆ ನೇರ ಆರೋಪ