ರಾಮಮಂದಿರ ದೇಶದ ಕತೆಯ ಪ್ರತಿಬಿಂಬ; ರಾಮನ ಬಗ್ಗೆ ಅಪಪ್ರಚಾರ ಸಲ್ಲದು: ಗುರೂಜಿ ರಿತೇಶ್ವರ್ ಮಹಾರಾಜ್

– ಮುಂದಿನ 442 ದಿನಗಳಲ್ಲಿ ಮಥುರೆಯಲ್ಲಿ ಕೃಷ್ಣ ಮಂದಿರ ತಲೆ ಎತ್ತಲಿದೆ

ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ಭವ್ಯವಾದ ರಾಮಮಂದಿರ (Ram Mandir) ನಿರ್ಮಾಣಕ್ಕೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿದ್ದು, ಇಡೀ ದೇಶ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ ಶ್ರೀರಾಮಚಂದ್ರ ಮಾಂಸಹಾರಿ ಎಂಬುದು ಸೇರಿದಂತೆ ವಿವಿಧ ರೀತಿಯಲ್ಲಿ ಅಪ ಪ್ರಚಾರ ಮಾಡುತ್ತಿರುವುದನ್ನು ಕೈಬಿಡಬೇಕು ಎಂದು ಉತ್ತರ ಪ್ರದೇಶದ ಆನಂದಧಾಮ್ ಪೀಠದ ಧಾರ್ಮಿಕ ಶಿಕ್ಷಕ ಮತ್ತು ಗುರೂಜಿ ರಿತೇಶ್ವರ್ ಜೀ ಮಹಾರಾಜ್ (Riteshwar Ji Maharaj)  ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರದ ನಂತರ ಇದೀಗ ಕೃಷ್ಣಮಂದಿರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದ್ದು, ಮುಂದಿನ 442 ದಿನಗಳಲ್ಲಿ ಮಥುರೆಯಲ್ಲಿ ಕೃಷ್ಣ ಮಂದಿರ ತಲೆ ಎತ್ತಲಿದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ

ದೇಶದಲ್ಲಿ ಹಲವು ಹಂತಗಳ ಚುನಾವಣೆಗಳು ನಿರಂತರವಾಗಿ ನಡೆಯತ್ತವೆ. ಇದೇ ರೀತಿ ಸದ್ಯದಲ್ಲಿಯೇ ಲೋಕಸಭಾ ಚುನಾವಣೆಯೂ ಎದುರಾಗಲಿದೆ. ಇದು ಕೂಡ ಉತ್ತಮ ಬೆಳವಣಿಗೆಯಲ್ಲವೇ? ರಾಷ್ಟ್ರೀಯ ವಾದ, ಸಾಂಸ್ಕೃತಿಕ ಮೌಲ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯುಳ್ಳ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ತಪ್ಪೇನು? ರಾಮಮಂದಿರ ಈ ದೇಶದ ಆತ್ಮ. ರಾಜಕೀಯ ಪಕ್ಷಗಳು ಯಾಕೆ ಚುನಾವಣೆಗೆ ಹೆದರಿಕೊಂಡಿವೆ. ರಾಮಮಂದಿರದಿಂದ ಉತ್ತರ ಪ್ರದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಉದ್ಯೋಗ ಕೂಡ ದೊರೆಯುತ್ತಿದೆ. ಶ್ರೀರಾಮಮಂದಿರದಿಂದ ಏಕತೆ ಮೂಡಿದ್ದು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಆದರೆ ದೇಶದ ಹಲವೆಡೆ ರಾಮನ ಕುರಿತು ಹಲವು ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಿದ್ದು, ಇದರಿಂದ ರಾಮಭಕ್ತರಿಗೆ ಆಘಾತ ಉಂಟಾಗಿದೆ. ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಸನಾತನ ಧರ್ಮ ಶ್ರೀರಾಮಚಂದ್ರನ ಆದರ್ಶಗಳಿಂದ ತುಂಬಿದೆ. ರಾಮಾಯಣದ ಸಂದರ್ಭದಲ್ಲಿಯೂ ಅಸುರರಂತೆ ಕೆಲಸ ಮಾಡಿದ್ದ ಸಂತತಿ ಈಗಲೂ ಮುಂದುವರೆದಿದೆ. ಇಂತಹ ಟೀಕೆ, ಟಿಪ್ಪಣಿಗಳನ್ನು ಕೈಬಿಟ್ಟು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದರು. ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

ಇದು ಕೇವಲ ರಾಮಮಂದಿರವಲ್ಲ, ರಾಷ್ಟ್ರಮಂದಿರ ಮತ್ತು ವಿಶ್ವ ಮಂದಿರವಾಗಿದೆ. ಇದು ಎಲ್ಲರನ್ನು ಒಳಗೊಳ್ಳಗೊಳ್ಳುವ ಮಂದಿರವಾಗಿದೆ. ಪ್ರತಿಯೊಬ್ಬರಿಗೂ ಮಂದಿರ ಉದ್ಘಾಟನೆಗೆ ಆಹ್ವಾನವಿದೆ. ಹೆಚ್ಚಿನ ಪ್ರಮಾಣದ ಮುಸ್ಲಿಂ ಸಮುದಾಯದ ಜನ, ಸಾಹಿತಿಗಳು ಕೂಡ ಮಂದಿರ ನಿರ್ಮಾಣವನ್ನು ಸ್ವಾಗತಿಸಿದ್ದಾರೆ. ಕವಿತೆ, ಲೇಖನ ಬರೆದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯೇತರ ಸಮಾರಂಭ. ದೇಶ–ವಿದೇಶಗಳ ಜನತೆ ಮಂದಿರ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಮಂದಿರ ವಿಚಾರದಲ್ಲಿ ರಾಜಕಾರಣ ಸಲ್ಲದು ಎಂದು ತಿಳಿಸಿದರು.