ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ: ಡಿ.ಕೆ ಶಿವಕುಮಾರ್

ಮೈಸೂರು: ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ. ಎಸ್.ಎಂ ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿ ಸಿಎಂ ಆಗಿದ್ದರು. ಅಂತಹದೊಂದು ಅವಕಾಶ ಸಮುದಾಯಕ್ಕೆ ಸಿಕ್ಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ಅವರು, ನಾನು ಸನ್ಯಾಸಿ ಅಲ, ಖಾವಿ ತೊಟ್ಟಿಲ್ಲ ನಾನು ಖಾದಿ ತೊಟ್ಟಿದ್ದೇನೆ. ಎಸ್.ಎಂ ಕೃಷ್ಣ ನಂತರ ಒಕ್ಕಲಿಗ ಸಮುದಾಯಕ್ಕೆ ಸಿಎಂ ಆಗುವ ಅವಕಾಶ ಬಂದಿದೆ. ಅದನ್ನು ಮಿಸ್ ಮಾಡಿಕೊಳ್ಳಬೇಡಿ ಅಂತಾ ಸಮುದಾಯದವರಿಗೆ ಹೇಳಿದ್ದೇನೆ. ಸಮುದಾಯದವರು ನನ್ನ ಪರ ನಿಲ್ಲಲ್ಲಿ ಅಂತಾ ಅವರಿಗೆ ಮನದಟ್ಟು ಮಾಡಿದ್ದೇನೆ. ಸಿಎಂ ಆಗಬೇಕಾದರೆ ಸರ್ಕಾರ ಬರಬೇಕು. ಸಿಎಂ ಆಗುವುದು ಆಮೇಲೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನನ್ನ ಬೆನ್ನಿಗೆ ಒಕ್ಕಲಿಗರು ಮಾತ್ರವಲ್ಲ ಎಲ್ಲಾ ಸಮಯದಾಯ ನಿಲ್ಲಲಿ ಎಂದರು.  ಇದನ್ನೂ ಓದಿ: ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್

ಇದು ಕುವೆಂಪು, ಬಸವಣ್ಣ, ಕನಕದಾಸರು, ಶಿಶುನಾಳ ಷರೀಫ್ ಅವರ ಕರ್ನಾಟಕ ಇದು. ಈ ನಾಡಿನ ಶಾಂತಿಯನ್ನು ಬಿಜೆಪಿ ಸರಕಾರ ಕೆಡಿಸುತ್ತಿದೆ. ಅನೇಕರ ವ್ಯಾಪಾರ ವಹಿವಾಟನ್ನು ಬಿಜೆಪಿ ಹಾಳು ಮಾಡಿದೆ. ಎಲ್ಲಾ ನೇಮಕಾತಿಗೂ ಬೆಲೆ ನಿಗದಿ ಮಾಡಿದ್ದಾರೆ. ಹೋಟೆಲ್ ನಲ್ಲಿ ತಿಂಡಿಗೆ ಬೆಲೆ ನಿಗದಿ ಮಾಡಿದ ರೀತಿ ಬೆಲೆ ಪಟ್ಟಿ ಹಾಕಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಆಗಿರೋ ಅಕ್ರಮ ಈ ದೇಶದಲ್ಲಿ ಎಲ್ಲೂ ಕೂಡ ನಡೆದಿಲ್ಲ. ಓಎಂಆರ್ ಶೀಟ್ ಅನ್ನೇ ತಿದ್ದುತ್ತಾರೆ ಅಂದರೆ ಎಂತಹ ಸ್ಥಿತಿ ಇದೆ ನೋಡಿ ಎಂದರು.

H VISHWANATH

ಒಬ್ಬ ಮಂತ್ರಿ ಲಂಚದಿಂದ ಹೋದ ಇನ್ನೊಬ್ಬ ಮಂಚದಿಂದ ಹೋದ. ಇಂತಹ ಹತ್ತಾರು ಹಗರಣ ನಡೆದಿದೆ. ಇಡೀ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಕರ್ನಾಟಕದ್ದು. ನಾನು ಎಂದಿಗೂ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವರೇ ಇದು ಭ್ರಷ್ಟ ಸರ್ಕಾರ ಎಂದು ಹೇಳಿದ್ದಾರೆ. ಅವರಿಗೆ ನೋಟೀಸ್ ಕೊಟ್ಟು ವಿವರಣೆ ಕೇಳಿ ಎಂದು ವಾಗ್ದಾಳಿ ನಡೆಸಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *