ಮೋದಿ ಅಪ್ಪಿದ ರಾಹುಲ್ ನಡೆ ಮಕ್ಕಳಾಟ – ಎಚ್.ವಿಶ್ವನಾಥ್

ಬೆಂಗಳೂರು: ಲೋಕಸಭೆ ಸದನದ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವರ್ತನೆಯನ್ನು ಮಿತ್ರ ಪಕ್ಷ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ರಾಹುಲ್ ಅವರ ವರ್ತನೆ ಹುಡುಗಾಟ, ಮಕ್ಕಳಾಟ ರೀತಿ ಇದೆ ಎಂದು ಹೇಳಿದ್ದಾರೆ. ಇತ್ತ ವಿಶ್ವನಾಥ್ ಹೇಳಿಕೆಯನ್ನೇ ಉಲ್ಲೇಖಿಸಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಹಾಮೈತ್ರಿ ಕೂಟದ ಬಗ್ಗೆ ವ್ಯಂಗ್ಯವಾಡಿದ್ದಾರೆ. ತಮ್ಮ ಪ್ರಧಾನಿ ಅಭ್ಯರ್ಥಿ ಬಗ್ಗೆ ಮಹಾಮೈತ್ರಿಕೂಟ ಯೋಚನೆ ಮಾಡುತ್ತಿರುವುದು ಇದನ್ನೇ. `ರಾಹುಲ್ ಗಾಂಧಿ ಬಗ್ಗೆ ಮಹಾಮೈತ್ರಿ ಕೂಟದ ಪಕ್ಷವೊಂದು ಅರ್ಥ ಮಾಡ್ಕೊಂಡಿದ್ದು, ಅವರು ಸರ್ಕಾರ ರಚನೆ ಮಾಡೋದು ಬರೀ ಕನಸಷ್ಟೇ ಎಂದು ಬಿಎಸ್‍ವೈ ಕಾಲೆಳೆದಿದ್ದಾರೆ.

ಇದಕ್ಕೂ ಮುನ್ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಧಿಕೃತವಾಗಿ ಪಕ್ಷದ ಕಚೇರಿಯಲ್ಲಿ ಕೆಲಸ ಪ್ರಾರಂಭ ಮಾಡಿದ ಬಳಿಕ ಮಾತನಾಡಿದ ವಿಶ್ವನಾಥ್ ಅವರು, ಹಿಂದೆ ಜನತ ಪರಿವಾರದಲ್ಲಿದ್ದ ಎಲ್ಲಾ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಲು ಯತ್ನಿಸುತ್ತೇನೆ. ಯಾವುದೇ ಕಾರಣದಿಂದ ಅವರು ಪಕ್ಷ ಬಿಟ್ಟು ಹೊರ ನಡೆದಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಅದ್ದರಿಂದ ಮತ್ತೆ ಪಕ್ಷಕ್ಕೆ ಬಂದು ಜನತಾ ಪರಿವಾರವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆಯಿಲ್ಲ. ಜಿಲ್ಲೆಯ ಸಮಿತಿಗಳು ಪಕ್ಷದ ಪರವಾಗಿ ಕೆಲಸ ಮಾಡಿ ಹೆಚ್ಚು ಸ್ಥಾನ ಗೆಲ್ಲಿಸಬೇಕು. ಸದ್ಯ ಇರುವ ರಾಜ್ಯ ಸಮಿತಿಯನ್ನ ವಿಸರ್ಜನೆ ಮಾಡಲಿದ್ದು, ಹೊಸ ಸಮಿತಿಯನ್ನ ಆದಷ್ಟು ಬೇಗ ರಚನೆ ಮಾಡುತ್ತೇವೆ. ಹಿರಿಯರು, ಯುವಕರು, ಮಹಿಳೆಯರು ಈ ಸಮಿತಿಯಲ್ಲಿ ಇರುತ್ತಾರೆ. ಜಿಲ್ಲಾ ಸಮಿತಿಗಳು ಸ್ಥಳೀಯ ಚುನಾವಣೆಯವರೆಗೂ ಹಾಗೇ ಮುಂದುವರೆಯುತ್ತದೆ. ನನ್ನ ಮೊದಲ ಪ್ರವಾಸ ಉತ್ತರ ಕರ್ನಾಟಕದಿಂದಲೇ ಪ್ರಾರಂಭ ಮಾಡಲಿದ್ದು, ಉತ್ತರ ಕರ್ನಾಟಕಕ್ಕೆ ಜೆಡಿಎಸ್ ಕೊಡುಗೆ ಏನು ಎಂಬುವುದನ್ನು ಜನತೆಗೆ ತಿಳಿಸುತ್ತೇವೆ ಎಂದು ಹೇಳಿದರು.

ಬಳಿಕ ಜೆಪಿ ಭವನದಲ್ಲಿ ಮಾತನಾಡಿದ ಅವರಯ ಸಿಎಂ ದುರ್ಬಲರಾಗಿದ್ದು, ರೇವಣ್ಣ ಸೂಪರ್ ಸಿಂಗ್ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ತಿರುಗೇಟು ಕೊಟ್ಟರು. ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ನಾಯಕರು ಈ ರೀತಿ ಮಾತನಾಡುವುದು ಸರಿಯಲ್ಲ. ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇರುವುದರಿಂದ ಯಾರು ಬೇಕಾದರು ಮಾತನಾಡಬಹುದು. ದೇವೇಗೌಡರು ದೇಶಕ್ಕೆ ಪ್ರಧಾನಿ ಆದವರು. ಅವರ ರಾಜಕೀಯ ಅನುಭವದಲ್ಲಿ ಸಲಹೆ ಪಡೆಯೋದು ತಪ್ಪಲ್ಲ. ಸಿಎಂ ಇದನ್ನೆ ಮಾಡುತ್ತಿದ್ದಾರೆ ಅಷ್ಟೇ. ದೇವೇಡಗೌಡರು ಸರ್ಕಾರದ ಫೈಲ್ ನೋಡುತ್ತಿಲ್ಲ. ಬಿಜೆಪಿ ಅವರು ಬಾಲಿಶವಾಗಿ ನಡೆದುಕೊಳ್ಳಬಾರದು ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *