ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

ತಿರುಪತಿ: ಚಂದ್ರಯಾನ-3 (Chandrayaan-3) ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ (ISRO scientists) ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ (Tirupati Venkatachalapathy Temple) ಆಗಮಿಸಿ ಈ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥಿಸಿತು.

ಚಂದ್ರಯಾನ 3 ಉಡಾವಣೆಯ ಮುನ್ನಾ ದಿನವಾದ ಇಂದು ಮುಂಜಾನೆ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಜೊತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಮಾದರಿಯೊಂದಿಗೆ ಆಗಮಿಸಿ ಪ್ರಾರ್ಥನೆ ಮಾಡಿದರು.

ಈ ವೇಳೆ ಮಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಉಡಾವಣೆ ನಡೆಯಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ 3 ಉಡಾವಣೆ ಶುಕ್ರವಾರ ಮಧ್ಯಾಹ್ನ 2:35ಕ್ಕೆ ನಡೆಯಲಿದೆ. ಚಂದ್ರಯಾನ-3 ಅನ್ನು ಎಲ್‌ಎಂವಿ3 ರಾಕೆಟ್‌ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ.

ಚಂದ್ರಯಾನ-3 ಉಡಾವಣೆ ದಿನಾಂಕವನ್ನು ಈ ಮೊದಲು ಜುಲೈ 13 ಕ್ಕೆ ನಿಗದಿಪಡಿಸಲಾಗಿತ್ತು ನಂತರ ಉಡಾವಣೆಯ ದಿನಾಂಕವನ್ನು ಪರಿಷ್ಕರಿಸಿ ಜುಲೈ 14ರ ಶುಕ್ರವಾರಕ್ಕೆ ನಿಗದಿ ಮಾಡಲಾಗಿದೆ.


Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]