ಇಸ್ರೇಲ್‌ನಲ್ಲಿ ಅಲ್‌ ಜಜೀರಾ ನಿಷೇಧ – ಇದು ಉಗ್ರರ ವಾಹಿನಿ ಎಂದ ನೆತನ್ಯಾಹು

ಟೆಲ್‌ ಅವಿವ್‌: ಕತಾರ್‌ ಮೂಲದ ಅಲ್‌ ಜಜೀರಾ (Al Jazeera) ಸುದ್ದಿ ವಾಹಿನಿ ಇಸ್ರೇಲ್‌ನಲ್ಲಿ ನಿಷೇಧವಾಗಲಿದೆ. ಇಸ್ರೇಲ್‌ ಸಂಸತ್ತು (Israel Parliament) ಅಲ್ ಜಜೀರಾ ಸುದ್ದಿ ವಾಹಿನಿಯನ್ನು ನಿಷೇಧಿಸುವ ಮಸೂದೆಯನ್ನು ಸೋಮವಾರ ಪಾಸ್‌ ಮಾಡಿದೆ.

ಈ ಮಸೂದೆ ಮಂತ್ರಿಗಳಿಗೆ ಇಸ್ರೇಲ್‌ನಿಂದ ಸುದ್ದಿ ವಾಹಿನಿಯ ಪ್ರಸಾರವನ್ನು ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ. ಮತಕ್ಕೆ ಹಾಕಿದಾಗ 70 ಮಂದಿ ಸಂಸದರು ಒಪ್ಪಿಗೆ ನೀಡಿದರೆ 10 ಮಸೂದೆಯನ್ನು ವಿರೋಧಿಸಿದ್ದರು. ಮಸೂದೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಹಾನಿಯುಂಟುಮಾಡುವ ವಿದೇಶಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವ ಅಧಿಕಾರದ ಜೊತೆ ಇಸ್ರೇಲ್‌ನಲ್ಲಿ ಅವರ ಕಚೇರಿ ಮುಚ್ಚಲು ಅನುಮತಿ ನೀಡುತ್ತದೆ. ಇದನ್ನೂ ಓದಿ: 410 ಕೋಟಿ ಒಡೆಯ ಸ್ಟಾರ್‌ ಚಂದ್ರು ಹೆಸರಲ್ಲಿ ಒಂದೇ ಒಂದು ಕಾರಿಲ್ಲ

ಮಸೂದೆ ಅಧಿಕೃತವಾಗಿ ಕಾನೂನಾಗಿ ಜಾರಿಗೆ ಬಂದ ಕೂಡಲೇ ಇಸ್ರೇಲ್‌ನಲ್ಲಿ ಅಲ್ ಜಜೀರಾ ನಿಷೇಧಿಸಲು ಕ್ರಮ ತೆಗೆದುಕೊಳ್ಳುವುದಾಗಿ ಪ್ರಧಾನಿ ನೆತನ್ಯಾಹು (PM Benjamin Netanyahu) ಪ್ರತಿಜ್ಞೆ ಮಾಡಿದ್ದಾರೆ. ಅಲ್ ಜಜೀರಾವನ್ನು ಉಗ್ರರ ವಾಹಿನಿ ಎಂದು ನೆತನ್ಯಾಹು ಕರೆದಿದ್ದಾರೆ. ಇದನ್ನೂ ಓದಿ: ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್‌ ಶಾ

ಗಾಜಾದಲ್ಲಿ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲ್ ಜಜೀರಾ ಸಿಬ್ಬಂದಿ ಪತ್ರಕರ್ತ ಮತ್ತು ಸ್ವತಂತ್ರ ಉದ್ಯೋಗಿ ಭಯೋತ್ಪಾದಕರು ಎಂದು ಇಸ್ರೇಲ್ ಜನವರಿಯಲ್ಲಿ ಹೇಳಿಕೊಂಡಿತ್ತು. ಗಾಯಗೊಂಡ ಚಾನೆಲ್‌ನ ಇನ್ನೊಬ್ಬ ಪತ್ರಕರ್ತ ಹಮಾಸ್‌  ಡೆಪ್ಯುಟಿ ಕಂಪನಿ ಕಮಾಂಡರ್ ಎಂದು ಹೇಳಿತ್ತು.