ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು – ಭಾರತದ ಭೇಟಿ ಮರೆಯಲಾಗದ ನೆನಪು ಎಂದ ಇಸ್ರೇಲ್ ಅಧಿಕಾರಿ

ನವದೆಹಲಿ: ಇಸ್ರೇಲ್‍ನ (Israel) ಸರ್ಕಾರಿ ಅಧಿಕಾರಿ ಲಿಯರ್ ಹೈಯತ್ ಅವರು ಭಾರತದ ಭೇಟಿ ಅವಿಸ್ಮರಣೀಯ ಎಂಬ ಶೀರ್ಷಿಕೆಯಡಿ ಹಸುಗಳ (Cows) ಗುಂಪಿನ ಫೋಟೋವನ್ನು ಹಂಚಿಕೊಂಡಿದ್ದ ಫೋಟೋ ವೈರಲ್ ಆಗುತ್ತಿದೆ.

ಅವಿಸ್ಮರಣೀಯ ಭಾರತದ (India) ಭೇಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೈಯತ್ ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಚರ್ಚೆ ನಡೆಸುತ್ತಿರುವುದು ಹಾಗೂ ಎರಡನೇ ಫೋಟೋದಲ್ಲಿ ಇಂಡಿಯಾ ಗೇಟ್ ಬಳಿ ನಿಂತಿರುವುದು ಹಾಗೂ ಮೂರನೇ ಫೋಟೋದಲ್ಲಿ ನೆನಪಿನ ಕಾಣಿಕೆಯನ್ನು ಹಿಡಿದಿರುವ ಫೋಟೋ ಇದೆ. ಇದರ ಜೊತೆಗೆ ಇನ್ನೊಂದು ಫೋಟೋವಿದ್ದು, ಅದರಲ್ಲಿ ಹಸುಗಳ ಗುಂಪೊಂದು ಹೋಗುತ್ತಿದೆ. ಇದೀಗ ಫೋಟೋಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಭಾರತಕ್ಕೆ ಮರೆಯಲಾಗದ ಹಾಗೂ ಮಹತ್ವದ ಭೇಟಿಯಿಂದ ಹಿಂತಿರುಗಿ. ಶೀಘ್ರದಲ್ಲೇ ಈ ಅದ್ಭುತ ದೇಶಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ.. ಆದ್ರೆ ಈ ಷರತ್ತು ಅನ್ವಯ – ಹೆಚ್‌ಡಿಕೆ

ಒಂದು ಚಿತ್ರದಲ್ಲಿ ರಸ್ತೆಯಲ್ಲಿ ಹಿಂಡು ಹಿಂಡಾಗಿ ಹಸುಗಳು ಹೋಗುತ್ತಿದೆ. ಈ ಫೋಟೋವನ್ನು ನೋಡಿದ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಪ್ರವಾಸಿಗರು ರಸ್ತೆಯಲ್ಲಿ ಹಸುಗಳು ಹೇಗೆ ಆಕರ್ಷವಾಗಿ ಕಾಣುತ್ತವೆ ಎಂಬುದು ತಮಾಷೆಯಾಗಿದೆ ಎಂದು ವ್ಯಂಗ್ಯವಾಡಿದ್ದಾನೆ. ಇನ್ನೊಬ್ಬ ಈತ ಭಾರತವನ್ನು ಟ್ರೋಲ್ ಮಾಡುತ್ತಿದ್ದಾನಾ ಎಂದು ಪ್ರಶ್ನಿಸಿದ್ದಾನೆ. ಇದನ್ನೂ ಓದಿ: ಹುಟ್ಟಿದ ಕೆಲ ಗಂಟೆಗಳಲ್ಲೇ ಶಿಶುವನ್ನು ಕತ್ತು ಹಿಸುಕಿ ಕೊಂದ ಪಾಪಿಗಳು!