ತಪ್ಪಾಗಿ ತಿಳಿದು ಮೂವರು ಒತ್ತೆಯಾಳುಗಳನ್ನೇ ಗುಂಡಿಕ್ಕಿ ಹತ್ಯೆಗೈದ ಇಸ್ರೇಲ್‌ ಸೇನೆ

ಟೆಲ್‌ ಅವೀವ್‌: ಜೆರುಸಲೆಮ್‌ ಮೇಲೆ ರಾಕೆಟ್‌ ದಾಳಿ ನಡೆದ ಸಂದರ್ಭದಲ್ಲಿ ಭಯೋತ್ಪಾದಕರು ಎಂದು ತಪ್ಪಾಗಿ ಭಾವಿಸಿ ಮೂವರು ಒತ್ತೆಯಾಳುಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ (Israel Army) ತಿಳಿಸಿದೆ.

ಹಮಾಸ್ (Hamas) ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಯುದ್ಧ ಪ್ರಾರಂಭವಾಯಿತು. ಇಲ್ಲಿಯವರೆಗೆ ಇಸ್ರೇಲಿ ಅಧಿಕಾರಿಗಳು ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದಾರೆ. ಅವರ ಪೈಕಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಮೆರಿಕ ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳುತ್ತಾ? – ಪ್ರಶ್ನೆಗೆ ಹಿಂದೂ ಧರ್ಮದ ಮೌಲ್ಯ ತಿಳಿಸಿದ ವಿವೇಕ್‌

ಹಮಾಸ್ ಬಂಡುಕೋರರ ಗುಂಪನ್ನು ನಾಶಮಾಡಲು ಮತ್ತು ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ಅಂದಾಜು 250 ಒತ್ತೆಯಾಳುಗಳನ್ನು ವಾಪಸ್‌ ಕರೆತರುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್, ಭಾರಿ ಆಕ್ರಮಣ ನಡೆಸಿದೆ. ಇಸ್ರೇಲ್‌ ಸೇನೆ ಮುತ್ತಿಗೆ ಹಾಕಿದ ಹೆಚ್ಚಿನ ಪ್ರದೇಶವನ್ನು ನಾಶಮಾಡಿದೆ.

ಯುದ್ಧದಿಂದ ಕನಿಷ್ಠ 18,800 ಜನರು ಹತರಾಗಿದ್ದಾರೆ. ಅವರ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಹಮಾಸ್ ಸರ್ಕಾರ ತಿಳಿಸಿದೆ. ಶುಕ್ರವಾರವೂ ಭೀಕರ ದಾಳಿ ಮುಂದುವರಿದಿದ್ದು, ದಕ್ಷಿಣದ ನಗರವಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲಿ ಸೈನಿಕರಿದ್ದ ಮನೆಯನ್ನು ಸ್ಫೋಟಿಸಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಇದನ್ನೂ ಓದಿ: ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ 60 ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರನ್ನು ರಕ್ಷಿಸುವ ಸಮಿತಿ ತಿಳಿಸಿದೆ.