ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ನಿಧಿ ಅಗರ್ವಾಲ್ ತಿರುಗೇಟು

ತೆಲುಗು ನಟಿ ನಿಧಿ ಅಗರ್ವಾಲ್ (Nidhhi Agerwal) ಅವರು ಪ್ರಭಾಸ್ ಜೊತೆಗಿನ ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ (Sreeleela) ಜೊತೆ ಹೋಲಿಕೆ ಮಾಡಿದ ನೆಟ್ಟಿಗನಿಗೆ ಖಡಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

‘ಕಿಸ್ಸಿಕ್‌’ ಬೆಡಗಿ ಶ್ರೀಲೀಲಾ ಜೊತೆ ಹೋಲಿಕೆ ಮಾಡಿ ನಿಧಿ ಅವರನ್ನು ಕೆಣಕಿದ್ದಾರೆ. 2019ರಲ್ಲಿ ‘ಇಸ್ಮಾಟ್ ಶಂಕರ್’ ಬಳಿಕ ನಿಧಿ ಎಷ್ಟು ಸಿನಿಮಾ ಮಾಡಿದ್ದಾರೆ. ಆದರೆ ಅದೇ 2021ರಲ್ಲಿ ಬಂದ ಶ್ರೀಲೀಲಾ 20 ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ನೆಟ್ಟಿಗನೊಬ್ಬ ಎಕ್ಸ್ ಖಾತೆಯಲ್ಲಿ ಕಾಮೆಂಟ್ ಮಾಡಿದ್ದಾನೆ. ಅದಕ್ಕೆ ನಿಧಿ ತಕ್ಕ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ

‘ಇಸ್ಮಾರ್ಟ್‌ ಶಂಕರ್‌’ (Ismart Shankar) ಚಿತ್ರ ಆದ್ಮೇಲೆ ‘ಹೀರೋ’ ಸಿನಿಮಾ ಮಾಡಿದ್ದೀನಿ. ಬಳಿಕ 3 ತಮಿಳು ಸಿನಿಮಾದಲ್ಲಿ ನಟಿಸಿದ್ದೇನೆ. ನಾನು ನನ್ನ ಸಮಯ ತೆಗೆದುಕೊಂಡು ಒಳ್ಳೆಯ ಸ್ಕ್ರೀಪ್ಟ್ ಎಂದು ನನಗೆ ಅನಿಸುವ ಚಿತ್ರಗಳಿಗೆ ಸಹಿ ಹಾಕುತ್ತೇನೆ. ಕೆಲವೊಮ್ಮೆ ನನ್ನ ಆಯ್ಕೆ ತಪ್ಪಾಗಿರಬಹುದು. ಆದರೆ ನನ್ನ ಉದ್ದೇಶ ಒಳ್ಳೆಯ ಸಿನಿಮಾದ ಭಾಗವಾಗುವುದು. ನನಗೆ ಯಾವುದೇ ಆತುರವಿಲ್ಲ. ನಾನು ಇಲ್ಲೇ ಉಳಿಯಬೇಕು ಎಂದುಕೊಂಡಿದ್ದೇನೆ ಸಹೋದರ. ನನ್ನ ಬಗ್ಗೆ ನೀವು ಚಿಂತಿಸಬೇಡಿ ಎಂದು ನಯವಾಗಿ ತಿರುಗೇಟು ಕೊಟ್ಟಿದ್ದಾರೆ ನಿಧಿ ಅಗರ್ವಾಲ್. ನಟಿಯ ನಡೆಗೆ ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೆ, ಪ್ರಭಾಸ್‌ ನಟನೆಯ ‘ದಿ ರಾಜಾ ಸಾಬ್’, ಪವನ್ ಕಲ್ಯಾಣ್ ಜೊತೆ ‘ಹರಿಹರ ವೀರ ಮಲ್ಲು’ ಸೇರಿದಂತೆ ಹಲವು ಚಿತ್ರಗಳಲ್ಲಿ ನಿಧಿ ಬ್ಯುಸಿಯಾಗಿದ್ದಾರೆ.