ಜೈಲು ಸೇರಿರೋ ದರ್ಶನ್‍ಗೆ ಹಳೇ ಕೇಸ್‍ಗಳಿಂದ್ಲೇ ಸಂಕಷ್ಟನಾ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‍ನಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ ಪಾಲಿಗೆ ಹಳೆಯ ಕೇಸ್‍ಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ.

ಆರೋಪಿ ದರ್ಶನ್ ಮೇಲಿರೋ ಕ್ರಿಮಿನಲ್ ಕೇಸ್‍ಗಳು ಮಗದಷ್ಟು ತಿಂಗಳು ನಟ ದರ್ಶನ್ ಅವರನ್ನು ಜೈಲಿನಲ್ಲಿರುವಂತೆ ಮಾಡುವುದು ದಟ್ಟವಾಗುತ್ತಿದೆ. ಕೊಲೆ ಆರೋಪಿ ದರ್ಶನ್ ಕ್ರಿಮಿನಲ್ ಕೇಸ್ ಗಳು ಈ ಹಿಂದೆ ಅಂದರೆ 2023 ರಲ್ಲಿ ವಿಜಯ ನಗರದಲ್ಲಿ, ಆರ್.ಆರ್.ನಗರ ಠಾಣೆಗಳಲ್ಲಿ ದಾಖಲಾದ ಕೇಸ್‍ಗಳು ಕ್ರಿಮಿನಲ್ ಹಿನ್ನೆಲೆಯುಳ್ಳ ಕೇಸ್‍ಗಳಾಗಿವೆ.

ಆರೋಪಿ ದರ್ಶನ್ (Challenging Star Darshan) ಮೇಲಿರುವ ಹಳೆ ಕೇಸ್‍ಗಳು ಅವರ ಜಾಮೀನಿಗೆ ದೊಡ್ಡ ಮಟ್ಟಡ ಹಿನ್ನಡೆ ತಂದೊಡ್ಡುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಳೆ ಕೇಸ್‍ಗಳನ್ನ ಮುಂದೆ ಇಟ್ಟು ದರ್ಶನ್ ಇದೇ ಮೊದಲು ಅಲ್ಲ ಪದೇ ಪದೇ ಕ್ರಿಮಿಲ್ ಕೇಸ್ ಗಳಲ್ಲಿ ಭಾಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಾಮೀನು ಕೊಟ್ಟರೆ ಹೊರಗಡೆ ಹೋಗಿ ಮತ್ತದೇ ಚಾಳಿ ಮುಂದುವರಿಸುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಜಾಮೀನು ಮಂಜೂರು ಮಾಡದಂತೆ ಒತ್ತಾಯ ಮಾಡುವ ಸಾಧ್ಯತೆಗಳು ಹೆಚ್ಚಾಗಿರತ್ತಂತೆ. ಇನ್ನು ಶಿಕ್ಷೆ ಪ್ರಕಟಿಸುವವಾಗ ಹಳೆಯ ಕೇಸ್ ಗಳನ್ನ ಪರಿಗಣಿಸಿ ಶಿಕ್ಷೆಯ ಪ್ರಮಾಣ ಹೆಚ್ಚು ಪ್ರಕಟಿಸುವ ಸಾಧ್ಯತೆಗಳು ದಟ್ಟವಾಗಿದೆ.

ಒಟ್ಟಿನಲ್ಲಿ ದರ್ಶನ್ ಮೇಲಿರುವ ಹಳೆ ಕೇಸ್ ಗಳು ನಟನಿಗೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಹೆಚ್ಚಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಬಳಿ ಇದೆ 2 ಯುಎಸ್ ಮೇಡ್ ಪಿಸ್ತೂಲ್‍ಗಳು!