ಬೆಳ್ಳಿತೆರೆಯಲ್ಲಿ ಮೂಡಿ ಬರಲಿದೆ ಸುಕೇಶ್- ಜಾಕ್ವೆಲಿನ್ ಲವ್ ಸ್ಟೋರಿ

ಸಿನಿಮಾರಂಗದಲ್ಲಿ ನೈಜ ಕಥೆಗೆ ಡಿಮ್ಯಾಂಡ್ ಜಾಸ್ತಿಯಾಗುತ್ತಿದೆ. ನಿಜ ಕಥೆಯನ್ನೇ ತೆರೆಯ ಮೇಲೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಹೀಗಿರುವಾಗ ಖತರ್ನಾಕ್ ಕಿಲಾಡಿ ಸುಕೇಶ್ ಕಥೆಯನ್ನೇ ಸಿನಿಮಾ ಮಾಡಲು ಬಿಟೌನ್ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ. ಕೋಟಿ ಕೋಟಿ ಲೂಟಿ ಮಾಡಿದ್ದ ಸುಕೇಶ್, ಬಾಲಿವುಡ್ (Bollywood) ನಟಿಮಣಿಯರನ್ನ ಬುಟ್ಟಿಗೆ ಹಾಕಿಕೊಂಡ ಕಥೆಯನ್ನ ಈಗ ಸಿನಿಮಾ ಮಾಡ್ತಿದ್ದಾರೆ.

ಕಳ್ಳನ ಜೀವನ ಇದೀಗ ಸಿನಿಮಾ ಆಗಲಿದ್ದು, ಸುಕೇಶ್‌ನ ವಂಚನೆ ಪ್ರಕರಣಗಳ ಜೊತೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ (Jacqueline Fernandez) ಲವ್ ಸ್ಟೋರಿಯನ್ನ ಮುಖ್ಯವಾಗಿರಿಸಿಕೊಂಡು ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರೊಬ್ಬರು ರೆಡಿಯಾಗಿದ್ದಾರೆ. ಇದನ್ನೂ ಓದಿ: ಕನ್ನಡ ಮಾತನಾಡಿ ಎಂದಿದ್ದಕ್ಕೆ ನಟ ಸಲ್ಮಾನ್ ಆಕ್ರೋಶ

ತಿಹಾರ್ ಜೈಲಿನ ಜೈಲರ್ ದೀಪಕ್ ಶರ್ಮಾ (Deepak Sharma) ಅವರನ್ನ ಇತ್ತೀಚಿಗೆ ನಿರ್ದೇಶಕ ಆನಂದ್ ಕುಮಾರ್ (Anand Kumar) ಭೇಟಿಯಾಗಿದ್ದಾರೆ. ಸುಕೇಶ್‌ನ ಕಥೆಯನ್ನು ಸಿನಿಮಾ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ದೀಪಕ್ ಶರ್ಮಾ ಅವರು ನಿರ್ದೇಶಕ ಆನಂದ್ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಸುದ್ದಿಗೆ ಇನ್ನಷ್ಟು ಪುಷ್ಠಿ ನೀಡಿದೆ.

 

View this post on Instagram

 

A post shared by Deepak Sharma (@deepaksharma_jailor)

ಆನಂದ್ ಕಳೆದೊಂದು ವರ್ಷದಿಂದಲೂ ಸುಕೇಶ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಸುಕೇಶ್ ವಿರುದ್ಧದ ಚಾರ್ಜ್‌ಶೀಟ್‌ಗಳು, ಹೇಳಿಕೆಗಳು ಇತರೆ ವಿಷಯಗಳನ್ನು ಸಂಗ್ರಹಿಸಿ ಅವುಗಳ ಮಾಹಿತಿ ಆಧರಿಸಿ ಕತೆಯನ್ನು ಸಿದ್ಧಪಡಿಸುತ್ತಿದ್ದಾರೆ. ಸುಕೇಶ್‌ರ ಕೆಲ ಆಪ್ತರನ್ನು ಸಹ ಆನಂದ್ ಈಗಾಗಲೇ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವು ಸುಕೇಶ್‌ನ ಜೀವನದ ವಿಷಯಗಳ ಬಗ್ಗೆ ಇರಲಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ರಿಯಲ್ ಕಥೆ ಸಿನಿಮಾದ ಪ್ರಧಾನ ಅಂಶವಾಗಿರಲಿದೆ.

ಸುಕೇಶ್ ಚಂದ್ರಶೇಖರ್ (Sukesh Chandrashekar) ಒಬ್ಬ ವಂಚಕ. ಬೆಂಗಳೂರು ಮೂಲದ ಈತ ತನ್ನ 17ನೇ ವಯಸ್ಸಿನಿಂದಲೇ ವಂಚನೆ ಆರಂಭಿಸಿದ್ದ. ಫೋರ್ಟಿಸ್ ಆಸ್ಪತ್ರೆ ಮುಖ್ಯಸ್ಥ ಶಿವೇಂಧರ್ ಪತ್ನಿಯಿಂದ 200 ಕೋಟಿ ವಸೂಲಿ ಮಾಡಿದ್ದ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಆತನಿಗೆ ಬಾಲಿವುಡ್ ನಟಿಯರೊಟ್ಟಿಗೆ ಇದ್ದ ಸಂಬಂಧ, ಅವನ ಐಶಾರಾಮಿ ಜೀವನದ ಮಾಹಿತಿಗಳು ಹೊರಬಿದ್ದವು. ಸದ್ಯ ತಿಹಾರ್ ಜೈಲಿನಲ್ಲಿ ಸುಕೇಶ್ ಬಂಧಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *