ಭಾವನಾ ಮೆನನ್ ಕಹಿ ಘಟನೆಗೂ, ಅವರ ಹೊಸ ಸಿನಿಮಾ ‘ದಿ ಸರ್ವೈವಲ್’ಗೂ ಸಂಬಂಧ ಇದೆಯಾ?

ಮಲಯಾಳಂ ಮತ್ತು ಕನ್ನಡದ ಖ್ಯಾತ ನಟಿ ಭಾವನಾ ಮೆನನ್ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಆಚೆ ಬರಲು ಅವರು ಇನ್ನೂ ಹೋರಾಟ ಮಾಡುತ್ತಿದ್ದಾರೆ. ಅವರ ಮೇಲಿನ ದೌರ್ಜನ್ಯ ಕೇಸ್ ಇನ್ನೂ ಕೋರ್ಟಿನಲ್ಲಿದೆ. ಈ ನಡುವೆ ಅವರು ಕಹಿ ಘಟನೆಯಿಂದ ಆಚೆ ಬರಲು ಸಿನಿಮಾಗಳನ್ನು ಒಪ್ಪಿದ್ದಾರೆ. ಸ್ಯ ಕನ್ನಡದಲ್ಲಿ ಒಂದು ಮತ್ತು ಮಲಯಾಳಂನಲ್ಲಿ ಮತ್ತೊಂದು ಚಿತ್ರ  ಒಪ್ಪಿಕೊಂಡಿದ್ದಾರೆ.  ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

ಕನ್ನಡದ ಪಿಂಕ್ ನೋಟು ಸಿನಿಮಾದ ಮುಹೂರ್ತ ಮೊನ್ನೆಯಷ್ಟೇ ನಡೆದಿದೆ. ಮಲಯಾಳಂನ ‘ದಿ ಸರ್ವೈವಲ್’ ಚಿತ್ರದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಇದೊಂದು ಕಿರುಚಿತ್ರವಾಗಿದ್ದು, ಮಹಿಳೆಯರಿಗೆ ಜಾಗೃತಿ ಮೂಡಿಸಲೆಂದು ನಿರ್ಮಾಣ ಮಾಡಿರುವ ಕಿರುಚಿತ್ರ ಎನ್ನಲಾಗುತ್ತಿದೆ. ಆದರೆ, ಈ ಚಿತ್ರದ ಬಗ್ಗೆ ಮಲಯಾಳಂನಲ್ಲಿ ಬೇರೆಯ ಮಾತೇ ಕೇಳಿ ಬರುತ್ತಿದೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

ಭಾವನಾ ಮೆನನ್ ಜೀವನದಲ್ಲಿ ನಡೆದ ಕಹಿ ಘಟನೆಯನ್ನೇ ಆಧರಿಸಿದ ಈ ಕಿರುಚಿತ್ರ ಮಾಡಲಾಗಿದೆ ಎನ್ನುವ ಚರ್ಚೆ ಮಲಯಾಳಂ ಸಿನಿಮಾ ರಂಗದಲ್ಲಿ ಶುರುವಾಗಿದೆ. ಇಂಥದ್ದೊಂದು ಚರ್ಚೆ ಆಗಲು ಕಾರಣ ಚಿತ್ರಕ್ಕಿಟ್ಟಿರುವ ಟೈಟಲ್. ‘ದಿ ಸರ್ವೈವಲ್’ ಶೀರ್ಷಿಕೆಯೇ ಅಂಥದ್ದೊಂದು ಅನುಮಾನವನ್ನು ಹುಟ್ಟು ಹಾಕಿದೆ. ಆದರೆ, ಅದಕ್ಕೂ ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿವೆ ಮೂಲಗಳು. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

ಮಹಿಳೆಯ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆಯಂತೆ. ಸ್ತನ ಕ್ಯಾನ್ಸರ್ ಇರುವ ಮಹಿಳೆಯರ ಆರೋಗ್ಯದ ಕುರಿತಾಗಿ ಇಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆಯಂತೆ. ಈ ಕಿರುಚಿತ್ರದಲ್ಲಿ ಭಾವನಾ ಮೆನನ್, ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಎನ್. ರಾಜೇಶ್ ಅವರ ಕಲ್ಪನೆಯಲ್ಲಿ ಈ ಚಿತ್ರ ಮೂಡಿ ಬಂದಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *