ಅನುಷ್ಕಾ ಜೊತೆ ಮದುವೆ ಆಗ್ತೀರಾ ಪ್ರಶ್ನೆಗೆ ಪ್ರಭಾಸ್ ಹೀಗಂದ್ರು

ಹೈದರಾಬಾದ್: ಬಾಹುಬಲಿ ಸಿನಿಮಾ ಬಿಡುಗಡೆಯಾದ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೀತಿಯಿದ್ದು, ಇಬ್ಬರು ಸ್ಟಾರ್‍ಗಳು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಗಳಿಗೆ ಪ್ರಭಾಸ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.

ಸದ್ಯಕ್ಕೆ ನಾನು ಮದುವೆಯಾಗುತ್ತಿಲ್ಲ, (ಮಹಿಳಾ) ಅಭಿಮಾನಿಗಳು ಬೇಜಾರು ಮಾಡಿಕೊಳ್ಳಬೇಕಿಲ್ಲ. ನನ್ನ ಮದುವೆಗೆ ಸಂಬಂಧಪಟ್ಟಂತೆ ಅನೇಕ ಗಾಸಿಪ್‍ಗಳು ಹರಿದಾಡುತ್ತಿವೆ. ಈಗ ಮಾತ್ರ ನಾನು ಮದುವೆ ಬಗ್ಗೆ ಯೋಚನೆಯೂ ಮಾಡಿಲ್ಲ. ನಾನು ಮಾತ್ರ ತುಂಬಾ ಅದೃಷ್ಟವಂತ ತುಂಬಾ ಜನ ನನ್ನನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಪ್ರಭಾಸ್ ಸಂತಸ ವ್ಯಕ್ತಪಡಿಸಿದರು.

ಈ ತರಹದ ಗಾಸಿಪ್ ಸುದ್ದಿಗಳು ಹರಡುವುದು ಸಾಮಾನ್ಯ. ನಾನು ಗಾಸಿಪ್‍ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಬ್ಬ ನಾಯಕ ಮತ್ತು ನಟಿ ಎರಡಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರೆ ಈ ತರಹದ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ನಾನು ಮೊದಲಿಗೆ ಇಂತಹ ಸುದ್ದಿಗಳು ಕೇಳಿದಾಗ ಮನಸ್ಸಿಗೆ ಬೇಜಾರು ಆಗುತ್ತಿತ್ತು. ಆದ್ರೆ ಈಗ ಮಾತ್ರ ನಾನು ಯಾವುದನ್ನು ಗಂಭೀರವಾಗಿ ಪರಿಗಣಿಸಲ್ಲ ಎಂದು ಪ್ರಭಾಸ್ ಮುಗಳ್ನಕ್ಕರು.

ಇದನ್ನೂ ಓದಿ: ಬಾಹುಬಲಿ ಪ್ರಭಾಸ್ ಗೆ ವಧು ಬೇಕಾಗಿದೆ! ಈ ಅರ್ಹತೆಯಿದ್ದರೆ ನೀವೂ ಟ್ರೈ ಮಾಡ್ಬಹುದು

ಕನ್ನಡದ ಬೆಡಗಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ನಟನೆಯ ಬಾಹುಬಲಿ-2 ಸಿನಿಮಾ ತೆರೆಕಂಡ ಬಳಿಕ ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಬಾಹುಬಲಿ ಎರಡನೇ ಭಾಗದಲ್ಲಿ ಅನುಷ್ಕಾ ಮತ್ತು ಪ್ರಭಾಸ್ ಕೆಮಿಸ್ಟ್ರಿ ಸುಂದರವಾಗಿ ಮೂಡಿಬಂದಿತ್ತು. ಸ್ಕ್ರೀನ್ ಮೇಲೆ ಮೂಡಿ ಮಾಡಿದ್ದ ಜೋಡಿ ನಿಜ ಜೀವನದಲ್ಲಿ ಒಂದಾದರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಆಸೆಪಟ್ಟಿದ್ದರು.

ಸದ್ಯ ಪ್ರಭಾಸ್ ಆ್ಯಕ್ಷನ್ ಮತ್ತು ಥ್ರಿಲ್ಲರ್ ಕಥೆಯನ್ನು ಹೊಂದಿರುವ `ಸಾಹೋ’ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಸಾಹೋ ಜೊತೆಯಾಗಿ ಕಾಣಿಸಿಕೊಳ್ಳುವ ನಟಿ ಯಾರೆಂಬುದನ್ನು ಸಿನಿಮಾ ತಂಡ ಬಹಿರಂಗ ಮಾಡಿಲ್ಲ.

https://www.instagram.com/p/BXQcwU8g8GR/?taken-by=prabhasworld

https://www.instagram.com/p/BXP3SpsgkqP/?taken-by=prabhasworld

https://www.instagram.com/p/BWu-dvyAkgU/?taken-by=prabhasworld

https://www.instagram.com/p/BWRZh1IgIdY/?taken-by=prabhasworld

https://www.instagram.com/p/BWFT4ujAbCu/?taken-by=prabhasworld

https://www.instagram.com/p/BVUxp-jAP2R/?taken-by=prabhasworld

https://www.instagram.com/p/BVSXMVZgN6q/?taken-by=prabhasworld

https://www.instagram.com/p/BU-9bEQgA07/?taken-by=prabhasworld

https://www.instagram.com/p/BUlvDOtAPfn/?taken-by=prabhasworld

https://www.instagram.com/p/BUcxsZ0AY5A/?taken-by=prabhasworld

https://www.instagram.com/p/BUChbmfAeEl/?taken-by=prabhasworld

Comments

Leave a Reply

Your email address will not be published. Required fields are marked *