ಕನ್ನಡತಿ ಶ್ರೀಲೀಲಾ (Sreeleela) ಇದೀಗ ತೆಲುಗಿನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆದರೆ ಇದೀಗ ನಟಿಗೆ ಲಕ್ ಕೈಕೊಟ್ಟಂತಿದೆ. ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದ್ದ ಶ್ರೀಲೀಲಾ ಇತ್ತೀಚೆಗೆ ಸಿಕ್ಕ ಸಿನಿಮಾಗಳು ಅವರ ಕೈತಪ್ಪಿ ಹೋಗುತ್ತಿವೆ. ವಿಜಯ್ ದೇವರಕೊಂಡ ನಂತರ ನಿತಿನ್ (Nithin) ಚಿತ್ರದಿಂದ ಕೂಡ ಔಟ್ ಆಗಿದ್ದಾರೆ.

ವಿಜಯ್ ದೇವರಕೊಂಡ (Vijay Devarakonda) ನಟಿಸಲಿರುವ 12ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಎಂದು ಚಿತ್ರತಂಡ ಘೋಷಿಸಿತ್ತು. ಆ ನಂತರ ‘ಕಿಸ್’ (Kiss Film) ನಟಿಯ ಬದಲು ಮಾಲಿವುಡ್ ನಟಿ ಮಮತಾಗೆ ಮಣೆ ಹಾಕಿತ್ತು ಚಿತ್ರತಂಡ. ಇದೀಗ ಸಡನ್ ಆಗಿ ನಿತಿನ್ ಸಿನಿಮಾದಿಂದ ಕೂಡ ಕಿಸ್ ಬ್ಯೂಟಿ ಕಿಕ್ ಔಟ್ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ನಿತಿನ್ ನಟನೆಯ ‘ರಾಬಿನ್‌ಹುಡ್’ ಚಿತ್ರಕ್ಕೆ ಶ್ರೀಲೀಲಾ ಫೈನಲ್ ಆಗಿದ್ದರು. ಈ ಹಿಂದೆ ಕೂಡ ನಿತಿನ್ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸಿರುವ ಕಾರಣ. ಮತ್ತೆ ಇದೇ ಜೋಡಿಯನ್ನು ಜೊತೆಯಾಗಿ ತೋರಿಸಲು ಪ್ಲ್ಯಾನ್ ಮಾಡಿದ್ದರು. ಆದರೆ ಈಗ ಈ ಚಿತ್ರದಿಂದ ಕೂಡ ನಟಿಯನ್ನು ಕೈಬಿಡಲಾಗಿದೆ ಎನ್ನಲಾಗಿದೆ. ತೆಲುಗಿಗೆ ಲಕ್ಕಿ ನಟಿಯಾಗಿದ್ದ ಶ್ರೀಲೀಲಾ ಈಗ ಅವಕಾಶದ ವಿಚಾರದಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ಇದನ್ನೂ ಓದಿ:ಡಾಲಿ ನಟನೆಯ ‘ಉತ್ತರಕಾಂಡ’ ಟೀಮ್ ಸೇರಿಕೊಂಡ ಚೈತ್ರಾ ಆಚಾರ್
ಶ್ರೀಲೀಲಾ ಬದಲು ಬೇರೆ ನಾಯಕಿಯ ಹುಡುಕಾಟದಲ್ಲಿದೆಯಂತೆ ಚಿತ್ರತಂಡ. ಅಷ್ಟಕ್ಕೂ ಈ ವಿಚಾರ ನಿಜಾನಾ? ಎಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.
