ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ದಕ್ಷಿಣದ ಕಲಾವಿದನ ಕಡೆಗಣಿಸಿತಾ?

ಬಾಲಿವುಡ್ ಅಂಗಳದಲ್ಲಿ ಸದ್ಯ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾದ್ದೇ ಮಾತು. ಕಳೆದ ಎರಡು ವರ್ಷಗಳಿಂದ ಸೋತು ಸುಣ್ಣವಾಗಿದ್ದ ಬಿಟೌನ್ ಅಂಗಳಲ್ಲಿ ಇದು ಕಾಮಧೇನು ಎನ್ನುವಂತೆ ಬಿಂಬಿಸಲಾಗುತ್ತಿದೆ. ದಾಖಲೆಯ ಮಟ್ಟದಲ್ಲಿ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಗೆಲ್ಲಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

ಇಂಥದ್ದೊಂದು ನಿರೀಕ್ಷೆಗೆ ಕಾರಣ ಮೊನ್ನೆ ರಿಲೀಸ್ ಆದ ಸಿನಿಮಾದ ಟ್ರೈಲರ್. ಐಪಿಎಲ್ ಫಿನಾಲೆ ವೇಳೆ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ವಿಶ್ವದಾದ್ಯಂತ ಟ್ರೈಲರ್ ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೂಲ ಸಿನಿಮಾಗಿಂತಲೂ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಟ್ರೈಲರ್ ವಿಮರ್ಶೆ ಮಾಡಲಾಗಿದೆ. ಆದರೆ, ಈ ಟ್ರೈಲರ್ ಬಿಟ್ಟು ಎಡವಟ್ಟು ಮಾಡಿಕೊಂಡಿದೆ ತಂಡ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

ಈ ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ ನಾಗ ಚೈತನ್ಯ ವಿಶೇಷ ಪಾತ್ರವನ್ನು ಮಾಡಿದ್ದು, ಟ್ರೈಲರ್ ನಲ್ಲಿ ನಾಗ ಚೈತನ್ಯ ಅವರು ಸರಿಯಾದ ರೀತಿಯಲ್ಲಿ ತೋರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ದಕ್ಷಿಣದ ಹೆಸರಾಂತ ಕಲಾವಿದನನ್ನು ಆಯ್ಕೆ ಮಾಡಿಕೊಂಡು, ಅವರನ್ನು ಟ್ರೈಲರ್ ನಲ್ಲಿ ಕಡೆಗಣಿಸಲಾಗಿದೆ ಎಂದು ನಾಗ ಚೈತನ್ಯ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

ಒಂದು ಕಡೆ ಅಮೀರ್ ಖಾನ್ ಅವರನ್ನು ಬೈಕಾಟ್ ಮಾಡಿ ಎಂದು ಕ್ಯಾಂಪೇನ್ ಶುರುವಾಗಿದ್ದರೆ, ಮತ್ತೊಂದು ಕಡೆ ನಾಗ ಚೈತನ್ಯ ಅವರನ್ನು ಸರಿಯಾಗಿ ತೋರಿಸಿಲ್ಲ ಎನ್ನುವ ಕೂಗು ಎದ್ದಿದೆ. ಅದೇನೇ ಇದ್ದರೂ, ಸಿನಿಮಾದ ಟ್ರೈಲರ್ ಮಾತ್ರ ಸೂಪರ್ ಆಗಿ ಮೂಡಿ ಬಂದಿದ್ದು, ದಾಖಲೆ ರೀತಿಯಲ್ಲಿ ಇದು ಜನರಿಗೆ ತಲುಪಲಿದೆ ಎನ್ನುವುದು ಬಿಟೌನ್ ಲೆಕ್ಕಾಚಾರವಾಗಿದೆ.

Comments

Leave a Reply

Your email address will not be published. Required fields are marked *