ಭಾರತದ ಮನವಿಗೆ ಸ್ಪಂದಿಸಿ ಭೂ ಗಡಿ ತೆರೆದ ಇರಾನ್‌

ನವದೆಹಲಿ: ಕನಿಷ್ಠ 10 ಸಾವಿರ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸುರಕ್ಷಿತ ಮಾರ್ಗವನ್ನು ಒದಗಿಸುವಂತೆ ಭಾರತ (India) ಸರ್ಕಾರ ಮಾಡಿದ ಮನವಿಗೆ ಇರಾನ್‌ (Iran) ಸ್ಪಂದಿಸಿದೆ.

ಭಾರತದ ಮನವಿಗೆ ಪ್ರತಿಕ್ರಿಯಿಸಿದ ಇರಾನ್ ತನ್ನ ವಾಯುಪ್ರದೇಶವನ್ನು ಸ್ಥಗಿತಗೊಳಿಸಿರುವುದರಿಂದ, ವಿದ್ಯಾರ್ಥಿಗಳು ಅಜರ್‌ಬೈಜಾನ್, ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನಕ್ಕೆ ದಾಟಲು ತನ್ನ ಭೂ ಗಡಿಗಳನ್ನು ಬಳಸಬಹುದು ಎಂದು ಹೇಳಿದೆ.  ಇದನ್ನೂ ಓದಿ: ಇರಾನ್‌ ಸರ್ಕಾರಿ ವಾಹಿನಿ ಮೇಲೆ ಬಾಂಬ್‌ ದಾಳಿ – ಲೈವ್‌ನಿಂದಲೇ ಓಡಿ ಹೋದ ನಿರೂಪಕಿ

 

ರಾಜಧಾನಿ ಟೆಹ್ರಾನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ಬಸ್‌ಗಳ ಮೂಲಕ ಮೊದಲ ಬ್ಯಾಚ್ ಅನ್ನು ಕೋಮ್ ಸಿಟಿಗೆ ಶಿಫ್ಟ್ ಮಾಡಲಾಗಿದೆ. ಟೆಹ್ರಾನ್‌ನ ಜಫ್ರಿಯಾ ಪ್ರದೇಶದಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತಿರುವ 9 ಕನ್ನಡಿಗರು ಸ್ಥಳಾಂತರ ಮಾಡುವಂತೆ ವಿದೇಶಾಂಗ ಸಚಿವರಿಗೆ  ಕರ್ನಾಟಕ ನಾನ್ ರೆಸಿಡೆನ್ಸಿ ಪೋರಂ  ಪತ್ರ ಬರೆದಿದೆ.  ಇದನ್ನೂ ಓದಿ: ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್