ಬಿಕಿನಿಯಲ್ಲೇ ಕೇಕ್ ಕತ್ತರಿಸಿದ ಅಮೀರ್ ಖಾನ್ ಪುತ್ರಿ ಇರಾ

ಬಾಲಿವುಡ್ ನ ಹೆಸರಾಂತ ನಟ ಅಮೀರ್ ಖಾನ್ ಪುತ್ರಿ ಇರಾ 25ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ವಿಶೇಷ ಅಂದರೆ, ಬಿಕಿನಿಯಲ್ಲೇ ಅವರು ಕೇಕ್ ಕಟ್ ಮಾಡುವ ಮೂಲಕ ಟ್ರೋಲ್ ಗೆ ಆಹಾರವಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಂತೂ ವೈರಲ್ ಆಗಿದೆ. ಇದು ನಿಜವಾದ ಫೋಟೋನಾ ಅಥವಾ ಎಡಿಟ್ ಮಾಡಲಾಗಿದೆ ಎಂಬ ಅನುಮಾನವನ್ನೂ ಹುಟ್ಟು ಹಾಕಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಅಮೀರ್ ಖಾನ್ ಮತ್ತು ಅಮೀರ್ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ. ವಿಚ್ಚೇದನದ ನಂತರವೂ ರೀನಾ ಮತ್ತು ಅಮೀರ್ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಹಾಗಾಗಿ ಒಟ್ಟಿಗೆ ಸೇರಿ ಮಗಳ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಮೀರ್, ಅಮೀರ್ ಪುತ್ರ ಶರ್ಟ್ ಲೆಸ್ ಆಗಿದ್ದು, ಮಗಳು ಮಾತ್ರ ಬಿಕಿನಿಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಆ ವಿಡಿಯೋವನ್ನು ಸ್ವತಃ ಅಮೀರ್ ಖಾನ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

ಇರಾ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಅಮೀರ್ ಖಾನ್, ರೀನಾ ದತ್ತ ಮತ್ತು ಅಮೀರ್ ಅವರ ಎರಡನೇ ಪತ್ನಿಯ ಮಗ ಅಜಾದ್ ಕೂಡ ಹಾಜರಿದ್ದು, ಇರಾ ಅವರ 25ನೇ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ, ಮಗಳಿಗೆ ವಿಶೇಷವಾಗಿ ಶುಭಾಶಯಗಳನ್ನೂ ಹೇಳಿದ್ದಾರೆ ಅಮೀರ್ ಖಾನ್. ಜೀವನ ಪೂರ್ತಿ ಸಂತೋಷವಾಗಿರು ಎಂದು ಹಾರೈಸಿದ್ದಾರೆ. ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು?

ರೀನಾ ದತ್ ಮತ್ತು ಅಮೀರ್ ಖಾನ್ 1986ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇರಾ ಮತ್ತು ಜುನೈದ್ ಖಾನ್ ಇಬ್ಬರು ಮಕ್ಕಳಿದ್ದಾರೆ. ಮದುವೆಯಾಗಿ ಒಂದೂವರೆ ದಶಕದ ನಂತರ ಈ ಜೋಡಿ ವಿಚ್ಚೇದನ ಪಡೆಯಿತು. ಆ ಬಳಿಕ ಅಮೀರ್ ಖಾನ್ ಅವರು ಕಿರಣ್ ರಾವ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟರು. ಈಗ ಕಿರಣ್ ರಾವ್ ಜೊತೆಯೂ ಅಮೀರ್ ಡೈವೋರ್ಸ್ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *