IPL ಇತಿಹಾಸದಲ್ಲೇ ದಾಖಲೆ – 26.75 ಕೋಟಿ ರೂ.ಗೆ ಬಿಕರಿಯಾದ ಶ್ರೇಯಸ್‌ ಅಯ್ಯರ್‌

2025ರ ಐಪಿಎಲ್‌ ಭಾಗವಾಗಿ ನಡೆದ ಮಗಾ ಹರಾಜಿನಲ್ಲಿ (IPL Mega Auction) ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಶ್ರೇಯಸ್‌ ಅಯ್ಯರ್‌ ಬರೋಬ್ಬರಿ 26.75 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಬಿಡ್ಡಿಂಗ್‌ನಲ್ಲಿ ಅಯ್ಯರ್‌ ಅವರನ್ನ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ಜಿದ್ದಾ ಜಿದ್ದಿ ನಡೆದಿತ್ತು. ಅಲ್ಲದೇ ಪ್ರೇಕ್ಷರಕ ಎದೆ ಬಡಿತವೂ ಹೆಚ್ಚಾಗಿತ್ತು, ಹರಾಜು ನಡೆಸಿಕೊಡುತ್ತಿದ್ದ ಮಹಿಳೆ ಮಲ್ಲಿಕಾ ಸಾಗರ್‌ ಬಿಡ್‌ ಕೂಗಿ ಕೂಗಿ ಸುಸ್ತಾಗಿದ್ದರು. ಆದ್ರೆ ಪಟ್ಟು ಬಿಡದ ಪಂಜಾಬ್‌ 26.75 ಕೋಟಿ ರೂ.ಗೆ ಅಯ್ಯರ್‌ ಅವರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – 26.75 ಕೋಟಿ ರೂ.ಗೆ ಬಿಕರಿಯಾದ ಶ್ರೇಯಸ್‌ ಅಯ್ಯರ್‌

2024ರ ಐಪಿಎಲ್‌ಗೆ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್‌ ಸ್ಟಾರ್ಕ್‌ 24.75 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದನ್ನೂ ಓದಿ: 16 ತಿಂಗಳ ಬಳಿಕ ಟೆಸ್ಟ್‌ ಶತಕ ಸಿಡಿಸಿ ಮಿಂಚಿದ ಕೊಹ್ಲಿ – ಡೊನಾಲ್ಡ್‌ ಬ್ರಾಡ್ಮನ್‌ ದಾಖಲೆ ಉಡೀಸ್‌

ಈವರೆಗೆ ಐಪಿಎಲ್‌ನಲ್ಲಿ 115 ಪಂದ್ಯಗಳನ್ನಾಡಿರುವ ಶ್ರೇಯಸ್‌ ಅಯ್ಯರ್‌ 3,127 ರನ್‌ ಗಳಿಸಿದ್ದಾರೆ. ಇದರಲ್ಲಿ 21 ಅರ್ಧಶತಕಗಳು ಸೇರಿವೆ. 2024ರ ಐಪಿಎಲ್‌ನಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲೇ ಕೋಲ್ಕತ್ತಾ ನೈಟ್‌ರೈಡರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಇಂದು ಬಿಡ್‌ ಆದ ಪ್ರಮುಖರು:
* ಹರ್ಷ್‌ದೀಪ್‌ ಸಿಂಗ್‌ – 18 ಕೋಟಿ ರೂ.‌ – ಪಂಜಾಬ್‌ ಕಿಂಗ್ಸ್‌
* ಕಾಗಿಸೋ ರಬಾಡ – 10.75 ಕೋಟಿ ರೂ. – ಗುಜರಾತ್‌ ಟೈಟಾನ್ಸ್‌
* ಜೋಸ್‌ ಬಟ್ಲರ್‌ – 15.75 ಕೋಟಿ ರೂ. – ಗುಜರಾತ್‌ ಟೈಟಾನ್ಸ್‌
* ಮಿಚೆಲ್‌ ಸ್ಟಾರ್ಕ್‌ – 11 ಕೋಟಿ ರೂ. – ಡೆಲ್ಲಿ ಕ್ಯಾಪಿಟಲ್ಸ್‌
* ಡೇವಿಡ್‌ ಮಿಲ್ಲರ್‌ – 7.50 ಕೋಟಿ ರೂ. – ಲಕ್ನೋ ಸೂಪರ್‌ ಜೈಂಟ್ಸ್‌