ಪಂದ್ಯ ಆರಂಭಕ್ಕೂ ಮುನ್ನ ಶ್ರೇಯಸ್‌ಗೆ All The Best ಹೇಳಿ ಕ್ರೀಡಾ ಸ್ಫೂರ್ತಿ ಮೆರೆದ ಕೊಹ್ಲಿ

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಉಸಿರು ಅಂದ್ರೆ ಅದು ವಿರಾಟ್‌ ಕೊಹ್ಲಿ. ಯಾವುದೇ ಪಂದ್ಯವಿದರಲಿ ತಮ್ಮನ್ನು ಕೆಣಕಿದ್ರೆ ಸುಮ್ಮನೆ ಬಿಡದ ಕೊಹ್ಲಿ (Virat Kohli), ಪ್ರತಿಭಾನ್ವಿತ ಆಟಗಾರರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಲೂ ಇರುತ್ತಾರೆ. ಅದೇ ರೀತಿ ಇಂದು ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರಿಗೂ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.

ಇದು ಫೈನಲ್‌ ಪಂದ್ಯ, ಟ್ರೋಫಿಗಾಗಿ 18 ವರ್ಷಗಳಿಂದ ನಡೆಯುತ್ತಿರುವ ಸಂಗ್ರಾಮ, ಪಂಜಾಬ್‌ ಕಿಂಗ್ಸ್‌ ತಂಡವೇ ಇಲ್ಲಿ ಎದುರಾಳಿ ಇದೆಲ್ಲವೂ ಗೊತ್ತಿದ್ದರೂ ಕಲ್ಮಶವಿಟ್ಟುಕೊಳ್ಳದ ಕೊಹ್ಲಿ ಶ್ರೇಯಸ್‌ ಅಯ್ಯರ್‌ (Shreyas Iyer) ಅವರಿಗೆ ʻಆಲ್‌ ದಿ ಬೆಸ್ಟ್‌ʼ ಹೇಳಿ ಕ್ರೀಡಾಸ್ಪೋರ್ತಿ ಮೆರೆದಿದ್ದಾರೆ. ಇದು ಕೊಹ್ಲಿ ಅವರ ಹೃದಯವಂತಿಕೆಗೆ ಮತ್ತೊಂದು ಸಾಕ್ಷಿಯಾಗಿದೆ. ಇದನ್ನೂ ಓದಿ: For The First Time ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ – ಇಂದಿನ ಲಕ್‌ ಹೇಗಿದೆ?

ಸಾಮಾನ್ಯ ಹುಡುಗ ಇಂದು ಕ್ರಿಕೆಟ್‌ ಲೋಕ್‌ ಕಿಂಗ್‌
ಇಂದು ಕ್ರಿಕೆಟ್‌ ಲೋಕದ ಕಿಂಗ್‌, ಆರ್‌ಸಿಬಿ ಎಂಬ ಮಹಾ ಕೋಟೆ ಕಟ್ಟಿದ ಸಾಮ್ರಾಟ ಎಂದು ಮೆರೆದಾಡುತ್ತಿರುವ ಕೊಹ್ಲಿ ತಂಡಕ್ಕೆ ಎಂಟ್ರಿ ಕೊಟ್ಟಾಗ ಜಸ್ಟ್ 19ರ ಹರೆಯದ ಹುಡುಗ ಅಷ್ಟೇ. ಆಕಸ್ಮಿಕವಾಗಿ ಐಪಿಎಲ್‌ನಲ್ಲಿ ಬೆಂಗಳೂರು ತಂಡಕ್ಕೆ ಸೇರಿದ ಅವನು, ನಂತರದ ದಿನಗಳಲ್ಲಿ ಚರಿತ್ರೆಯನ್ನ ಬರೆದ. ಸಾಮಾನ್ಯನಾಗಿ ಬಂದಾತ ಕಿಂಗ್ ಆಗಿ ಮೆರೆದ. ರನ್ ಮೆಷಿನ್ ಕಿಂಗ್ ಕೊಹ್ಲಿ (Virat Kohli) ರಾಜನಾಗಿ ಮೆರೆದರೂ ಅದೊಂದು ಕೊರಗು 18 ವರ್ಷಗಳಿಂದ ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಕಾಡುತ್ತಲೇ ಇತ್ತು. ಈಗ ಆ ಕೊರಗನ್ನು ನೀಗಿಸುವ ಅವಕಾಶ ಮತ್ತೆ ಕೂಡಿ ಬಂದಿದೆ. ಅದೇನೆ ಇರಲಿ ಈ ಬಾರಿಯಾದರೂ 18 ವರ್ಷಗಳ ವನವಾಸ ತಪ್ಪಿಸುವಂತೆ ಅಭಿಮಾನಿಗಳಿ ಹರಕೆ ಹೊತ್ತಿದ್ದಾರೆ. ಇದನ್ನೂ ಓದಿ: RCB vs PBKS: ಅಹಮದಾಬಾದ್‌ ಸ್ಟೇಡಿಯಂ ತುಂಬಾ ಆರ್‌ಸಿಬಿ ಫ್ಯಾನ್ಸ್‌

ಆರ್‌ಸಿಬಿ ಪ್ಲೇಯಿಂಗ್-11
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್‌, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್.

ಪಂಜಾಬ್ ಪ್ಲೇಯಿಂಗ್-11
ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಜೋಶ್ ಇಂಗ್ಲಿಸ್, ನೆಹಲ್ ವಧೇರ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ವಿಜಯ್ ಕುಮಾರ್ ವೈಶಾಕ್, ಅಜ್ಮತುಲ್ಲಾ ಒಮರ್ಜೈ, ಕೈಲ್ ಜೆಮಿಸನ್, ಯಜುವೇಂದ್ರ ಚಹಲ್, ಅರ್ಷ್‌ದೀಪ್‌ ಸಿಂಗ್‌. ಇದನ್ನೂ ಓದಿ: Photo Gallery | ಭಾರತೀಯ ಸೇನೆಗೆ ಫೈನಲ್‌‌ ಪಂದ್ಯ ಅರ್ಪಣೆ… ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಿ