RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಬೆಂಗಳೂರು: 15ನೇ ಆವೃತ್ತಿ ಐಪಿಎಲ್ ಮೆಗಾ ಹರಾಜು ಮುಕ್ತಾಯಗೊಂಡಿದೆ. ಹರಾಜಿನಲ್ಲಿ ಕರ್ನಾಟಕ ಮೂಲದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಕೇವಲ ಇಬ್ಬರು ಕನ್ನಡಿಗರನ್ನು ಖರೀದಿಸಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ.

ಆರ್​ಸಿಬಿ ತಂಡ ಮೆಗಾ ಹರಾಜಿನಲ್ಲಿ ಒಟ್ಟು 88.45 ಕೋಟಿ ರೂ. ಖರ್ಚು ಮಾಡಿ ಒಟ್ಟು 22 ಜನ ಆಟಗಾರರನ್ನು ಖರೀದಿಸಿದೆ. ಆದರೆ ಸ್ಥಳೀಯ ಆಟಗಾರರ ಪೈಕಿ ಕರ್ನಾಟಕದ ಯುವ ಆಟಗಾರ ಅನೀಶ್ವರ್ ಗೌತಮ್ ಮತ್ತು ಲವ್‌ನಿತ್‌ ಸಿಸೋದಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನೀಶ್ವರ್ ಗೌತಮ್ ಮತ್ತು ಲವ್‌ನಿತ್‌ ಸಿಸೋದಿಯಾ ಭಾರತದ ಅಂಡರ್-19 ತಂಡದಲ್ಲಿ ಮತ್ತು ಕರ್ನಾಟಕ ರಾಜ್ಯ ತಂಡದಲ್ಲಿ ಮಿಂಚು ಹರಿಸಿದ್ದಾರೆ. ಈ ಪ್ರದರ್ಶನವನ್ನು ಗಮನಿಸಿ ತಲಾ 20 ಲಕ್ಷ ರೂ. ನೀಡಿ ಆರ್​ಸಿಬಿ ಇಬ್ಬರು ಆಟಗಾರರನ್ನು ಖರೀದಿಸಿದೆ. ಇದನ್ನೂ ಓದಿ: ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್‌ ಮಾಡಿದ ಆಕಾಶ್‌ ಅಂಬಾನಿ

 

ಹರಾಜಿನಲ್ಲಿ ಕರ್ನಾಟಕದ ಸ್ಟಾರ್ ಆಟಗಾರರಾದ ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣರಂತಹ ಆಟಗಾರರು ಇದ್ದರೂ ಕೂಡ ಆರ್​ಸಿಬಿ ಮಾತ್ರ ಕರ್ನಾಟಕದ ಆಟಗಾರರನ್ನು ಖರೀದಿಸಲು ಮುಂದಾಗಲಿಲ್ಲ. ಈ ನಡೆಯನ್ನು ಗಮನಿಸಿ ಕರ್ನಾಟಕದ ಮಾಜಿ ಆಟಗಾರರು ಮತ್ತು ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ಆಡಳಿತ ಮಂಡಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

ಆರ್​ಸಿಬಿ ಹರಾಜಿನಲ್ಲಿ ಈವರೆಗೆ ಹೆಸರೇ ಕೇಳಿರದ ಆಟಗಾರರನ್ನು ಖರೀದಿಸಿದೆ. ಆದರೆ ಕರ್ನಾಟಕದಲ್ಲೇ ಇದ್ದ ಪ್ರತಿಭಾನ್ವಿತ ಆಟಗಾರರನ್ನುಕಡೆಗಣಿಸಿದೆ. ಹಾಗಾಗಿ ಕರ್ನಾಟಕದ ಆಟಗಾರರು ಹೆಚ್ಚಿರುವ ತಂಡಕ್ಕೆ ನಾವು ಐಪಿಎಲ್‍ನಲ್ಲಿ ಸಪೋರ್ಟ್ ಮಾಡುತ್ತೇವೆ ಎಂದು ಕರ್ನಾಟಕದ ಮಾಜಿ ಆಟಗಾರರೊಬ್ಬರು ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.

 

Comments

Leave a Reply

Your email address will not be published. Required fields are marked *