ಐಪಿಎಲ್ ಮೆಗಾ ಹರಾಜಿಗೆ ಬೆಂಗಳೂರು ಸಜ್ಜು – ಸ್ಟಾರ್ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು

ಬೆಂಗಳೂರು: 2022ರ ಐಪಿಎಲ್ ಆರಂಭಕ್ಕೂ ಮುನ್ನ ಫೆ.12 ಮತ್ತು 13ರಂದು ಬೆಂಗಳೂರಿನ ಹೋಟೆಲ್ ಐಟಿಸಿ ಗಾರ್ಡೇನಿಯದಲ್ಲಿ ಮೆಗಾ ಹರಾಜು ನಡೆಯಲಿದೆ. ಈಗಾಗಲೇ 10 ಫ್ರಾಂಚೈಸ್‍ಗಳು ಕೂಡ ಹರಾಜಿನಲ್ಲಿರುವ 590 ಆಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಕ್ರಿಕೆಟ್ ಲೋಕದ ಅತ್ಯಂತ ದುಬಾರಿ ಲೀಗ್ ಎಂದು ಹೆಸರುವಾಸಿಯಾಗಿರುವ ಐಪಿಎಲ್‍ನಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸಾಗಿರುತ್ತದೆ. ಇದೀಗ ಫೆ.12 ಮತ್ತು 13ರ ಮೆಗಾ ಹರಾಜಿನ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಹರಾಜಿನಲ್ಲಿ 370 ಭಾರತೀಯ ಆಟಗಾರರು ಮತ್ತು 220 ವಿದೇಶಿ ಆಟಗಾರರು ಸೇರಿ ಒಟ್ಟು 590 ಆಟಗಾರರು ಕಾಣಿಸಿಕೊಂಡಿದ್ದು, ಇವರಲ್ಲಿ ಯಾರು ಕೋಟಿ ವೀರರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ತವರಿನಲ್ಲಿ ಕೊಹ್ಲಿ ಹೊಸ ಮೈಲಿಗಲ್ಲು – ಧೋನಿ, ಸಚಿನ್ ಜೊತೆ Elite ಪಟ್ಟಿಗೆ ಸೇರ್ಪಡೆ

ಫ್ರಾಂಚೈಸ್‍ಗಳು ಹಲವು ಲೆಕ್ಕಾಚಾರಗಳನ್ನು ಹಾಕಿಕೊಂಡು ಆಟಗಾರರ ಮೇಲೆ ಹಣ ಸುರಿಯಲು ಪ್ಲಾನ್ ಹಾಕಿಕೊಂಡಿದ್ದಾರೆ. 10 ಫ್ರಾಂಚೈಸ್‍ಗಳು ಕೂಡ ಅಳೆದು ತೂಗಿ ಆಟಗಾರರ ಆಯ್ಕೆಗೆ ಸಿದ್ಧತೆ ಮಾಡಿಕೊಂಡಿದೆ. ಹರಾಜಿನಲ್ಲಿರುವ ಸ್ಟಾರ್ ಆಟಗಾರರ ಪೈಕಿ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್, ದೀಪಕ್ ಚಹಾರ್, ಇಶಾನ್ ಕಿಶನ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಫಾಬಿನ್ ಅಲೆನ್, ಡ್ವೇನ್ ಬ್ರಾವೋ, ಎವಿನ್ ಲೆವಿಸ್, ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಶಕಿಬ್ ಅಲ್ ಹಸನ್, ಕ್ವಿಂಟನ್ ಡಿ ಕಾಕ್, ಶಿಮ್ರೋನ್ ಹೆಟ್ಮೇರ್, ನಿಕೋಲಸ್ ಪೂರನ್, ಲ್ಯಾಮ್ ಲಿವಿಂಗ್‍ಸ್ಟೋನ್, ರಾಸ್ಸಿ ವಾನ್ ಡೇರ್ ಡೆಸನ್ ಮೇಲೆ ಎಲ್ಲಾ ಫ್ರಾಂಚೈಸ್‍ಗಳು ಮುಗಿ ಬೀಳುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ನೆಟ್ಟಿಗರಿಂದ ಟ್ರೋಲ್ ಆಯ್ತು ಎಸ್‍ಆರ್‌ಹೆಚ್ ಹೊಸ ಜೆರ್ಸಿ

ಒಟ್ಟು 10 ಫ್ರಾಂಚೈಸ್‍ಗಳ ಪೈಕಿ ಪಂಜಾಬ್ ಕಿಂಗ್ಸ್ ಜೊತೆ 72 ಕೋಟಿ ರೂ., ಸನ್ ರೈಸರ್ಸ್ ಹೈದರಾಬಾದ್ 68 ಕೋಟಿ, ರಾಜಸ್ಥಾನ್ ರಾಯಲ್ಸ್ 62 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 57 ಕೋಟಿ, ಮುಂಬೈ ಇಂಡಿಯನ್ಸ್ 48 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 48 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 48 ಕೋಟಿ, ಡೆಲ್ಲಿ ಕಾಪಿಟಲ್ಸ್ 47.50 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ 59 ಕೋಟಿ ಮತ್ತು ಗುಜರಾತ್ ಟೈಟಾನ್ಸ್ ಜೊತೆ 52 ಕೋಟಿ ರೂ. ಇದ್ದು ಈ ಹಣದಲ್ಲಿ ಕನಿಷ್ಠ 18 ಗರಿಷ್ಠ 25 ಆಟಗಾರರನ್ನು ಖರೀದಿಸಲು ಅವಕಾಶ ಇದೆ.

Comments

Leave a Reply

Your email address will not be published. Required fields are marked *