ಎಬಿ ಡಿವಿಲಿಯರ್ಸ್ ಸಿಕ್ಸರ್ ಗೆ ಕೊಹ್ಲಿ ಪ್ರತಿಕ್ರಿಯೆ-ವಿಡಿಯೋ ವೈರಲ್

ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸಿಡಿಸಿದ ಸಿಕ್ಸರ್ ನೋಡಿ ಕೊಹ್ಲಿ ಅಚ್ಚರಿ ವ್ಯಕ್ತಪಡಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಉತ್ತಮ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು. ಇಬ್ಬರ 8ನೇ ಶತಕದ ಜೊತೆಯಾಟದಲ್ಲಿ ತಂಡ 118 ರನ್ ಗಳಿಸಿತ್ತು. ಈ ವೇಳೆ ಕೊಹ್ಲಿ ಔಟಾಗಿ ಪೆವಿಲಿಯನ್ ಸೇರಿದ್ದರು. ಆದರೂ ಡಿವಿಲಿಯರ್ಸ್ ತಮ್ಮ ಸ್ಫೋಟಕ ಆಟವನ್ನು ಮುಂದುವರಿಸಿ ತಂಡದ ಜಯಗಳಿಸಲು ಕಾರಣವಾದರು.

ಪಂದ್ಯದ 19 ಓವರ್ ವೇಳೆ ಡೆಲ್ಲಿ ಬೌಲರ್ ಬೋಲ್ಟ್ ಎಸೆತವನ್ನು ಎಬಿಡಿ ಸಿಕ್ಸರ್ ಬಾರಿಸಿದರು. ಇದನ್ನು ಕಂಡ ಕೊಹ್ಲಿ ಕುಳಿತಲ್ಲೇ ಅಚ್ಚರಿ ವ್ಯಕ್ತಪಡಿಸಿದ್ದರು. ಬಳಿಕ ಆರ್ ಸಿಬಿ ಡೆಲ್ಲಿ ವಿರುದ್ಧ 5 ವಿಕೆಟ್ ಗೆಲುವು ಪಡೆಯಿತು. ಡೆಲ್ಲಿ ವಿರುದ್ಧದ ಗೆಲುವಿನಿಂದ ಕೊಹ್ಲಿ ಪಡೆ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದೆ. ಅಲ್ಲದೇ ಈ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿರಿದೆ.

ಟೂರ್ನಿಯಲ್ಲಿ ಆರ್ ಸಿಬಿ ಇನ್ನು 3 ಪಂದ್ಯಗಳನ್ನು ಆಡಬೇಕಿದ್ದು, ಈ ಪಂದ್ಯಗಳಲ್ಲಿ ಗೆಲುವು ಪಡೆದರೆ 14 ಅಂಕಗಳನ್ನು ಪಡೆಯಲಿದೆ. ಸದ್ಯ ಇದುವರೆಗೂ ಹೈದರಾಬಾದ್ ತಂಡ ಮಾತ್ರ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದೆ. ಆಡಿರುವ 11 ಪಂದ್ಯಗಳಲ್ಲಿ ಹೈದರಾಬಾದ್ 18 ಅಂಕ ಪಡೆದು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಉಳಿದಂತೆ ಚೆನ್ನೈ 14 ಹಾಗೂ ಪಂಜಾಬ್, ಕೋಲ್ಕತ್ತಾ ತಂಡಗಳು ತಲಾ 12 ಅಂಕಗಳನ್ನು ಪಡೆದಿದೆ. ಆದ್ರೆ ಕೋಲ್ಕತ್ತಾ 12 ಪಂದ್ಯಗಳನ್ನು ಆಡಿದೆ.

https://twitter.com/SPOVDO/status/995523259394281472?

Comments

Leave a Reply

Your email address will not be published. Required fields are marked *