ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಆಘಾತ – IPLನಿಂದ ವೇಗಿ ಜೋಫ್ರಾ ಆರ್ಚರ್‌ ಔಟ್‌

ಮುಂಬೈ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧ ಮಂಗಳವಾರ (ಮೇ 9) ನಡೆಯಲಿರುವ ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಆಘಾತ ಎದುರಾಗಿದೆ.

ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಜೋಫ್ರಾ ಆರ್ಚರ್‌ (Jofra Archer) ಗಾಯದ ಸಮಸ್ಯೆಗೆ ತುತ್ತಾಗಿ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Asia Cup: ಪಾಕ್‌ಗೆ ಕೈತಪ್ಪಿದ ಏಷ್ಯಾಕಪ್‌ ಆತಿಥ್ಯ – ಲಂಕಾದಲ್ಲಿ ಟೂರ್ನಿ ನಡೆಯುವ ಸಾಧ್ಯತೆ

ಮುಂಬೈ ಪರ 10 ಪಂದ್ಯಗಳನ್ನಾಡಿರುವ ಜೋಫ್ರಾ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದರು. ಇದೀಗ ಆರ್‌ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನವೇ ಜೋಫ್ರಾ ಔಟ್‌ ಆಗಿದ್ದಾರೆ. ಆರ್ಚರ್‌ ಬದಲಿಗೆ ಇಂಗ್ಲೆಂಡ್‌ನ ಅನುಭವಿ ಆಟಗಾರ ಕ್ರಿಸ್‌ ಜೋರ್ಡಾನ್‌ (Chris Jordan) ಅವರನ್ನ ಮುಂಬೈ ಆಹ್ವಾನಿಸಿದೆ. ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ECB) ಜೋಫ್ರಾ ಆರ್ಚರ್‌ ಅವರ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡ ತಿಳಿಸಿದೆ.

ಮುಂದಿನ ಜೂನ್‌ 16 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಆಶಸ್‌ 2023 ಟೂರ್ನಿಗೆ ಇಂಗ್ಲೆಂಡ್‌ ತಂಡಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: RCBvsMI ಹೈವೋಲ್ಟೇಜ್‌ ಕದನ – ಇಂದು ಸೋತರೆ RCB ಪ್ಲೇ ಆಫ್‌ ತಲುಪೋದು ಕಷ್ಟ