ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ನಡುವಿನ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಬ್ಯಾಟ್‍ನಿಂದ ಶತಕದ ನಿರೀಕ್ಷೆಯಲ್ಲಿದ್ದಾರೆ.

ವೈಟ್ ಬಾಲ್ ಕ್ರಿಕೆಟ್‍ನಲ್ಲಿ ಪಂಟರ್ ಆಗಿದ್ದ ಕಿಂಗ್ ಕೊಹ್ಲಿ ಬ್ಯಾಟ್ ಯಾಕೋ ಸೈಲೆಂಟ್ ಆಗಿರುವಂತೆ ಕಂಡು ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಹ್ಲಿ ಬ್ಯಾಟ್‍ನಿಂದ ಶತಕ ಸಿಡಿಯದೇ 2 ವರ್ಷಗಳಾಗಿದೆ. ಕೊಹ್ಲಿ 2019ರಲ್ಲಿ ಬಾಂಗ್ಲದೇಶ ವಿರುದ್ಧ ಸಿಡಿಸಿದ ಶತಕದ ಬಳಿಕ ಈವರೆಗೆ ಕೊಹ್ಲಿ ಶತಕ ಬಾರಿಸಿಲ್ಲ. ಹಾಗಾಗಿ ಇಂದು ನಡೆಯಲಿರುವ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಸ್ಥಾನಕ್ಕೆ ‘KGF’ ಜೊತೆ ರಜತ್ ಭಯ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

15ನೇ ಆವೃತ್ತಿ ಐಪಿಎಲ್‍ನಲ್ಲಿ ಕೊಹ್ಲಿ ಒಟ್ಟು 15 ಪಂದ್ಯಗಳಿಂದ 2 ಅರ್ಧಶತಕ ಸಹಿತ 334 ರನ್ ಸಿಡಿಸಿದ್ದಾರೆ. ಈ ಬಾರಿ ಬ್ಯಾಟಿಂಗ್‍ನಲ್ಲಿ ಅಬ್ಬರಿಸಲು ವಿಫಲವಾಗಿರುವ ಕೊಹ್ಲಿ ಮೂರು ಬಾರಿ ಗೋಲ್ಡನ್ ಡಕ್‍ಔಟ್ ಕೂಡ ಆಗಿದ್ದಾರೆ. ಇದೀಗ ಇಂದಿನ ಪಂದ್ಯದಲ್ಲಿ ಕೊಹ್ಲಿ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಇದನ್ನೂ ಓದಿ: ಆರ್‌ಸಿಬಿ ಬೌಲರ್‌ಗಳಿಗೆ ಭೇಷ್ ಅಂದ ಕೆ.ಎಲ್ ರಾಹುಲ್

2018ರಿಂದ ಈ ವರೆಗೆ ಐಪಿಎಲ್‍ನಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ ತಂಡ 26 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ 11 ಬಾರಿ ಗೆದ್ದರೆ, ಆರ್‌ಸಿಬಿ 13 ಬಾರಿ ಗೆದ್ದಿದೆ. ಇಂದು ಅಹಮದಾಬಾದ್‍ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾದಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಮೂಲಕ 27ನೇ ಬಾರಿ ಮತ್ತೆ ಈ ಎರಡು ತಂಡಗಳು ಸೆಣಸಾಡಲಿದ್ದು ಗೆದ್ದ ತಂಡ ಗುಜರಾತ್ ಟೈಟಾನ್ಸ್ ತಂಡದೊಂದಿಗೆ ಫೈನಲ್ ಪಂದ್ಯವಾಡಲಿದೆ. ಸೋತ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಡಲಿದೆ. ಇದನ್ನೂ ಓದಿ: ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮವೇನು?
https://twitter.com/sumittkar/status/1530094065907138560
ಅಹಮದಾಬಾದ್‍ದ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

Leave a Reply