ಟೀಕೆಗಳ ನಡುವೆಯೂ ಮೈಲಿಗಲ್ಲು ಸಾಧಿಸಿದ ಕಿಂಗ್ ಕೊಹ್ಲಿ

IPL 2022 RCB VS SRH 13

ಮುಂಬೈ: 2022ರ 15ನೇ ಆವೃತ್ತಿ ಐಪಿಎಲ್‌ನಲ್ಲಿ ಸಂಪೂರ್ಣ ಫಾರ್ಮ್ ಕಳೆದುಕೊಂಡಿರುವ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್‌ಕೊಹ್ಲಿ ಭಾರೀ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿ ಐಪಿಎಲ್‌ನಲ್ಲೂ ತಮ್ಮದೇ ಸಾಧನೆ ಮಾಡುತ್ತಿದ್ದ ಕೊಹ್ಲಿ, ಈ ಬಾರಿ ಸಾಕಷ್ಟು ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಟೀಕೆಗಳ ನಡುವೆಯೂ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮಗದೊಂದು ಮೈಲಿಗಲ್ಲು ಸ್ಥಾಪಿಸಿದ್ದು, 6,500 ರನ್‌ಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

ಐಪಿಎಲ್ 2022 ಟೂರ್ನಿಯಲ್ಲಿ ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪದ್ಯದಲ್ಲಿ 14 ಎಸೆತಗಳನ್ನು ಕೊಹ್ಲಿ ಗಳಿಸಿದ್ದು, 20 ರನ್‌ಗಳೇ ಆದರೂ ಐಪಿಎಲ್ ಇತಿಹಾಸದಲ್ಲೇ 6,500 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಐಪಿಎಲ್‌ನ ತಮ್ಮ 220ನೇ ಪಂದ್ಯದ 212ನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ 36.21ರ ಸರಾಸರಿಯಲ್ಲಿ ಒಟ್ಟು 6,519 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 43 ಅರ್ಧಶತಕಗಳು ಸೇರಿವೆ. 215 ಸಿಕ್ಸರ್ ಹಾಗೂ 568 ಬೌಂಡರಿಗಳನ್ನು ಸಿಡಿಸಿರುವ ಕೊಹ್ಲಿ, 129.26ರ ಸ್ಟ್ರೈಕ್‌ರೇಟ್‌ ಕಾಯ್ದುಕೊಂಡಿದ್ದು, ಇನ್ನಿಂಗ್ಸ್‌ಒಂದರಲ್ಲಿ ಗರಿಷ್ಠ ಸ್ಕೋರ್ 113 ಆಗಿದೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

ಟಿ20 ಯಲ್ಲೂ 10,500 ರನ್ ಸಾಧನೆ: ಈ ನಡುವೆ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ 10,500 ರನ್‌ಗಳ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮುನ್ನಡೆಯಲ್ಲಿರುವ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಒಟ್ಟು 14,562 ರನ್ ಗಳಿಸಿದ್ದಾರೆ.

virat kohli

ಮತ್ತೆ ಬ್ಯಾಟಿಂಗ್ ವಿಫಲ: ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ವಿರಾಟ್ ಬ್ಯಾಟಿಂಗ್ ವೈಫಲ್ಯ ಮುಂದುವರಿಯಿತು. ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಕೊಹ್ಲಿಗೆ ಸಾಧ್ಯವಾಗಲಿಲ್ಲ. 14 ಎಸೆತಗಳನ್ನು ಎದುರಿಸಿದ ವಿರಾಟ್ 1 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 20 ರನ್ ಗಳಿಸಿ ಔಟ್ ಆದರು.

Comments

Leave a Reply

Your email address will not be published. Required fields are marked *