IPL 2022 Retentions: ಧೋನಿಗಿಂತಲೂ ಜಡೇಜಾ ದುಬಾರಿ – ಯಾರಿಗೆ ಎಷ್ಟು ಕೋಟಿ?

ಮುಂಬೈ: ನಿರೀಕ್ಷೆಯಂತೆ ಆರ್‌ಸಿಬಿ ವಿರಾಟ್‌ ಕೊಹ್ಲಿ, ಚೆನ್ನೈ ತಂಡ ಧೋನಿ, ಮುಂಬೈ ಟೀಂ ರೋಹಿತ್‌ ಶರ್ಮಾ ಅವರನ್ನು ಉಳಿಸಿಕೊಂಡಿದೆ.

ಮುಂದಿನ ವರ್ಷ ಜನವರಿಯಲ್ಲಿ ಐಪಿಎಲ್‌ ಬೃಹತ್‌ ಹರಾಜು ನಡೆಯಲಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಇರಲಿರುವ ಗರಿಷ್ಠ 4 ಆಟಗಾರರ ಹೆಸರನ್ನು ತಿಳಿಸಲು ಮಂಗಳವಾರ ಫ್ರಾಂಚೈಸಿಗಳಿಗೆ ಗಡುವು ನೀಡಲಾಗಿತ್ತು. ಅದರಂತೆ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಮಾಹಿತಿ ಮತ್ತು ಆಟಗಾರರಿಗೆ ಎಷ್ಟು ಕೋಟಿ ರೂ. ನೀಡಲಾಗುತ್ತದೆ ಎಂಬುದನ್ನು ತಿಳಿಸಿವೆ.

ವಿಶೇಷ ಏನೆಂದರೆ ಚೆನ್ನೈ ರವೀಂದ್ರ ಜಡೇಜಾ ಅವರಿಗೆ 16 ಕೋಟಿ ರೂ. ನೀಡಿದರೆ ಧೋನಿಗೆ 12 ಕೋಟಿ ರೂ. ನೀಡಲಿದೆ. ಆರ್‌ಸಿಬಿ ಕೊಹ್ಲಿಗೆ 15 ಕೋಟಿ ರೂ. ನೀಡಲಿದೆ. ಇದನ್ನೂ ಓದಿ:  ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು:
ವಿರಾಟ್‌ ಕೊಹ್ಲಿ, ಗ್ಲೇನ್‌ ಮ್ಯಾಕ್ಸ್‌ವೆಲ್‌, ಸಿರಾಜ್‌

ಮುಂಬೈ ಇಂಡಿಯನ್ಸ್‌:
ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ಕಿರನ್‌ ಪೋಲಾರ್ಡ್‌

ಚೆನ್ನೈ ಸೂಪರ್ ಕಿಂಗ್ಸ್:
ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಋತುರಾಜ್ ಗಾಯಕ್ವಡ್, ಮೊಯೀನ್ ಅಲಿ

ಕೋಲ್ಕತ್ತಾ ನೈಟ್ ರೈಡರ್ಸ್
ಸುನೀಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್

ಸನ್ ರೈಸರ್ಸ್ ಹೈದರಾಬಾದ್
ಕೇನ್ ವಿಲಿಯಮ್ಸನ್, ಉಮ್ರನ್ ಮಲಿಕ್, ಅಬ್ದುಲ್ ಸಮದ್,

ಡೆಲ್ಲಿ ಕ್ಯಾಪಿಟಲ್ಸ್:
ರಿಷಬ್ ಪಂತ್,  ಅಕ್ಷರ್ ಪಟೇಲ್, ಪೃಥ್ವಿ ಶಾ, ಹೆನ್ರಿಕ್ ನಾರ್ಟ್ಜೆ

ರಾಜಸ್ಥಾನ್ ರಾಯಲ್ಸ್
ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್

ಪಂಜಾಬ್ ಕಿಂಗ್ಸ್
ಮಯಂಕ್ ಅಗರ್ವಾಲ್, ಅರ್ಷ್​ದೀಪ್ ಸಿಂಗ್

Comments

Leave a Reply

Your email address will not be published. Required fields are marked *