20 ಕೋಟಿಗೆ ರಾಹುಲ್‌ ಹರಾಜು: ಆಕಾಶ್‌ ಚೋಪ್ರಾ ಭವಿಷ್ಯ

ಮುಂಬೈ: ಐಪಿಎಲ್‌ ಹರಾಜಿನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ದುಬಾರಿ ಬೆಲೆಗೆ ಮಾರಾಟವಾಗಬಹುದು ಎಂದು ಭಾರತದ ಮಾಜಿ ಆಟಗಾರ ಆಕಾಶ್‌ ಚೋಪ್ರಾ ಹೇಳಿದ್ದಾರೆ.

ಮೆಗಾ ಹರಾಜಿನ ಸಮಯದಲ್ಲಿ ಆಟಗಾರನ ಸಂಭಾವನೆಗೆ ಯಾವುದೇ ಮಿತಿಯಿಲ್ಲದಿದ್ದರೆ, ಕೆಎಲ್ ರಾಹುಲ್ 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಹರಾಜು ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಮುಂದಿನ ಐಪಿಎಲ್‍ನಲ್ಲಿ ಕನ್ನಡಿಗ ರಾಹುಲ್ ಆರ್​ಸಿಬಿ ಕ್ಯಾಪ್ಟನ್?

ಐಪಿಎಲ್ 2022 ಕ್ಕೆ ಮುಂಚಿತವಾಗಿ ರಾಹುಲ್ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕತ್ವವನ್ನು ತೊರೆಯಲು ಮುಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಲಕ್ನೋ ಮತ್ತು ಅಹಮದಾಬಾದ್‌ ತಂಡಗಳು ಸೇರ್ಪಡೆಯಾಗಿದ್ದು ಹರಾಜು ಪ್ರಕ್ರಿಯೆ ಜೋರಾಗಿ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್‌ – 2008ರಲ್ಲಿ ಬಿಡ್‌ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ರಾಹುಲ್‌ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಇರುವ ಕಾರಣ ಫ್ರಾಂಚೈಸಿಗಳು ಅವರನ್ನು ದುಬಾರಿ ಬೆಲೆ ನೀಡಿ ಖರೀದಿಸಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

Comments

Leave a Reply

Your email address will not be published. Required fields are marked *